ADVERTISEMENT

ಹುಣಸೂರು: ವಿಶ್ವಶಾಂತಿ ಸಂಸ್ಥೆಯ ಲಕ್ಕಪ್ಪ ಸ್ವಾಮೀಜಿ ನಿಧನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 3:47 IST
Last Updated 19 ಸೆಪ್ಟೆಂಬರ್ 2025, 3:47 IST
ವಿಶ್ವಶಾಂತಿ ಸಂಸ್ಥೆಯ ಲಕ್ಕಪ್ಪ ಸ್ವಾಮೀಜಿ 
ವಿಶ್ವಶಾಂತಿ ಸಂಸ್ಥೆಯ ಲಕ್ಕಪ್ಪ ಸ್ವಾಮೀಜಿ    

ಹುಣಸೂರು: ತಾಲ್ಲೂಕಿನ ರತ್ನಾಪುರಿ ಗ್ರಾಮದ ವಿಶ್ವಶಾಂತಿ ಸಂಸ್ಥೆಯ ಸ್ಥಾಪಕ, ಶಿಕ್ಷಣ ತಜ್ಞ ಲಕ್ಕಪ್ಪ ಸ್ವಾಮೀಜಿ (95) ಬುಧವಾರ ರಾತ್ರಿ ಆಶ್ರಮದಲ್ಲಿ ನಿಧನರಾದರು. ಅಂತ್ಯಕ್ರಿಯೆ ಗುರುವಾರ ಆಶ್ರಮದಲ್ಲೇ ನಡೆಯಿತು.

ಅವರು ದಲಿತ ಮತ್ತು ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣ ನೀಡಲೆಂದು ಸಂಸ್ಥೆಯನ್ನು 70ರ ದಶಕದಲ್ಲಿ ಆರಂಭಿಸಿದರು. ಪ್ರಾಥಮಿಕ ಹಂತದಿಂದ ಪದವಿಯವರೆಗೂ ಸಂಸ್ಥೆಯು ಎಲ್ಲ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಗ್ರಾಮೀಣ ಮಕ್ಕಳಿಗೆ ವಸತಿ ಮತ್ತು ಬಿಸಿಯೂಟದ ವ್ಯವಸ್ಥೆಯೂ ಇದೆ. ದಲಿತ ಸಮುದಾಯದ ಅವರು ಪದವೀಧರರು. ಸರ್ಕಾರಿ ಉದ್ಯೋಗವನ್ನು ತ್ಯಜಿಸಿ, ಸನ್ಯಾಸತ್ವ ದೀಕ್ಷೆ ಪಡೆದಿದ್ದರು. ಸಾವಿರಾರು ವಿದ್ಯಾರ್ಥಿಗಳು ಸ್ವಾಮೀಜಿಗೆ ಅಂತಿಮ ನಮನ ಸಲ್ಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT