ADVERTISEMENT

ಸರ್ಕಾರಿ ಭೂಮಿ ತೆರವು ಕಾರ್ಯಕ್ಕೆ ಅಡ್ಡಿ: ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 13:49 IST
Last Updated 24 ಡಿಸೆಂಬರ್ 2018, 13:49 IST

ಮೈಸೂರು: ಸರ್ಕಾರಿ ಭೂಮಿಗೆ ಅನಧಿಕೃತವಾಗಿ ಹಾಕಿಕೊಂಡಿದ್ದ ಬೇಲಿಯನ್ನು ತಹಶೀಲ್ದಾರ್‌ ರಮೇಶ್‌ ಬಾಬು ನೇತೃತ್ವದಲ್ಲಿ ಸೋಮವಾರ ತೆರವುಗೊಳಿಸಲಾಯಿತು.

ಕುರುಬಾರಹಳ್ಳಿ ಸರ್ವೆ ನಂಬರ್ 4ರಲ್ಲಿ ಲಲಿತ ಮಹಲ್‌ ಹೆಲಿ‍ಪ್ಯಾಡ್‌ ಬಳಿಯ ಸರ್ಕಾರಿ ಜಮೀನಿಗೆ ಜೆ.ಮನು ಎಂಬವರು ಬೇಲಿ ಹಾಕಿಕೊಂಡಿದ್ದರು. ಸ್ಥಳದಲ್ಲಿ ಜೆಸಿಬಿ ಯಂತ್ರ ಬರುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಮನು ಕಾರ್ಯಾಚರಣೆ ನಡೆಸದಂತೆ ತಡೆ ಒಡ್ಡಿದರು. ಜೆಸಿಬಿ ಯಂತ್ರದ ಕೆಳಗೆ ಕುಳಿತು ಅಡ್ಡಿಪಡಿಸಿದರು.

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಆಲನಹಳ್ಳಿ ಪೊಲೀಸರು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಕಾರಣದಿಂದ ಮನು ಅವರನ್ನು ಬಂಧಿಸಿದರು.

ADVERTISEMENT

ಸರ್ಕಾರಿ ಭೂಮಿಗೆ ಅನಧಿಕೃತವಾಗಿ ಬೇಲಿ ಹಾಕಿರುವುದು ಹಾಗೂ ತೆರವು ಕಾರ್ಯಕ್ಕೆ ತಡೆ ಒಡ್ಡಿದ್ದಕ್ಕಾಗಿ ತಹಶೀಲ್ದಾರ್‌ ರಮೇಶ್ ಬಾಬು ಅವರು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.