ADVERTISEMENT

‘ಬದುಕಿನ ಪಾಠವನ್ನೂ ಕಲಿಸಿ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 11:45 IST
Last Updated 20 ಮಾರ್ಚ್ 2023, 11:45 IST
ಮೈಸೂರಿನ ರಾಮಕೃಷ್ಣ ನಗರದ ವಿಶ್ವಮಾನವ ವಿದ್ಯಾನಿಕೇತನ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಲಾಯಿತು
ಮೈಸೂರಿನ ರಾಮಕೃಷ್ಣ ನಗರದ ವಿಶ್ವಮಾನವ ವಿದ್ಯಾನಿಕೇತನ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಲಾಯಿತು   

ಮೈಸೂರು: ‘ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದಲ್ಲಿರುವ ಪಾಠ ಹೇಳಿಕೊಡುವ ಜೊತೆಗೆ ಬದುಕಿನ ಪಾಠಗಳನ್ನೂ ಕಲಿಸಿಕೊಡಬೇಕು’ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಶಿವಾಜಿ ಜೋಯಿಸ್ ಸಲಹೆ ನೀಡಿದರು.

ಇಲ್ಲಿನ ರಾಮಕೃಷ್ಣ ನಗರದಲ್ಲಿರುವ ವಿಶ್ವಮಾನವ ವಿದ್ಯಾನಿಕೇತನ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ಆನಂದಕ್ಕೆ ಕೊರತೆಯಾಗದಂತೆ ಬದುಕಿನ ಸುಖವನ್ನು– ವೈಭವವನ್ನು ಅನುಭವಿಸಬೇಕು. ಸುಖ, ಸಂತೋಷ ಎನ್ನುವುದು ಆನಂದದ ಕೆಳಹಂತದ್ದಾಗಿದೆ. ಆನಂದವಾಗಿರಬೇಕಾದರೆ ಬದುಕಿನಲ್ಲಿ ಮಾಡುವ ಸಾಧನೆಯಲ್ಲಿ ತೃಪ್ತಿ ಇರಬೇಕು’ ಎಂದರು.

ADVERTISEMENT

ಸಂಸ್ಥೆಯ ಅಧ್ಯಕ್ಷ ಪ್ರೊ.ಚಂದ್ರಶೇಖರೇಗೌಡ, ಶ್ರೀನಿವಾಸಮೂರ್ತಿ, ದಿವಾಕರ್, ಗೋವಿಂದಯ್ಯ, ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ, ಸಂಸ್ಥೆಯ ಕಾರ್ಯದರ್ಶಿ ಪ್ರಭಾಮಣಿ, ಯೋಗಶಿಕ್ಷಕ ರಾವಣಿಕರ್ ಇದ್ದರು.

ಮಕ್ಕಳಿಂದ ಯೋಗಾಸನ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.