ADVERTISEMENT

ಮೈಸೂರು | ಚಿರತೆ ದಾಳಿ: ಹಸು ಸಾವು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 13:39 IST
Last Updated 13 ಡಿಸೆಂಬರ್ 2023, 13:39 IST
<div class="paragraphs"><p>ತಿ.ನರಸೀಪುರ ತಾಲೂಕಿನ ಕೇತುಪುರ ಸಮೀಪ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು</p></div>

ತಿ.ನರಸೀಪುರ ತಾಲೂಕಿನ ಕೇತುಪುರ ಸಮೀಪ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು

   

ತಿ.ನರಸೀಪುರ: ‌ತಾಲ್ಲೂಕಿನ ಕೇತುಪುರ ಸಮೀಪದ ಮಲ್ಲಿಕಾರ್ಜುನ ಸ್ವಾಮಿ‌ ಬೆಟ್ಟದ ಬಳಿ ನಿಂಗೇಗೌಡ ಎಂಬುವರಿಗೆ ಸೇರಿದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.

ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿ ನಾಗರಾಜು, ಉಮೇಶ್, ಪಶು ವೈದ್ಯಾಧಿಕಾರಿ ಗಣೇಶ್ ಪರಿಶೀಲನೆ ನಡೆಸಿದರು. ಹಸುವಿನ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ADVERTISEMENT

ರೈತ ಮುಖಂಡ ಕಳ್ಳೀಪುರ ಮಹದೇವಸ್ವಾಮಿ ಮಾತನಾಡಿ, ‘ಈ ಹಿಂದೆ ಬೆಟ್ಟದ ಮೇಲೆ ವಿದ್ಯಾರ್ಥಿಯೊಬ್ಬನನ್ನು ಬಲಿ ಪಡೆದಿದ್ದ ಚಿರತೆಯನ್ನು ಸೆರೆಹಿಡಿದ ನಂತರ ಚಿರತೆಗಳ ಹಾವಳಿ ಕಡಿಮೆಯಾಗಿತ್ತು. ಆದರೆ, ಈಗ ಮತ್ತೆ ಹಸುವನ್ನು ಕೊಂದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈ ಭಾಗದಲ್ಲಿ ಚಿರತೆ ಸೆರೆಯ ಟಾಸ್ಕ್ ಫೋರ್ಸ್‌ ತಂಡವನ್ನು ನಿಯೋಜಿಸಬೇಕು. ಚಿರತೆ ಹಾವಳಿಯನ್ನು ತಪ್ಪಿಸಬೇಕು. ಹಸು ಮಾಲೀಕರಿಗೆ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಗ್ರಾಮಸ್ಥರಾದ ಚಿನ್ನಸ್ವಾಮಿ, ಚನ್ನೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.