ADVERTISEMENT

ಮೈಸೂರು: ಬೆಳಕು, ಶಬ್ದ ತಂತ್ರಗಾರಿಕೆ ಕಾರ್ಯಾಗಾರ 29ರಿಂದ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 6:47 IST
Last Updated 17 ಮಾರ್ಚ್ 2024, 6:47 IST

ಮೈಸೂರು: ‘ಇಲ್ಲಿನ ಕುವೆಂಪುನಗರದ ನುಡಿರಂಗ ಫೌಂಡೇಶನ್ ಹಾಗೂ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಿಂದ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಮಾರ್ಚ್ 29ರಿಂದ 31ರವರೆಗೆ ಬೆಳಕು ಮತ್ತು ಶಬ್ದ ತಂತ್ರಗಾರಿಕೆ ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದು ಸಂಸ್ಥೆ ಅಧ್ಯಕ್ಷ ಸ.ರ.ಸುದರ್ಶನ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಂಗಭೂಮಿ ತಂತ್ರಜ್ಞ ಅರುಣಮೂರ್ತಿ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಲಿದೆ. ಬೆಳಕು ಮತ್ತು ಧ್ವನಿಗೆ ಸಂಬಂಧಿಸಿದ ತಾಂತ್ರಿಕ ವಿಚಾರಗಳನ್ನು ತಿಳಿಸಲಿದ್ದು, ಒಂದು ಕಾರ್ಯಕ್ರಮದಲ್ಲಿ ಬೆಳಕು ಮತ್ತು ಧ್ವನಿಯನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಚಿಸುವವರು ಮೊ.ಸಂ. 98458 98982 ಸಂಪರ್ಕಿಸಬಹುದು’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಟ್ರಸ್ಟಿ ನುಡಿ ಸುದರ್ಶನ, ಕಾರ್ಯದರ್ಶಿ ಸವಿತಾ ಪ.ಮಲ್ಲೇಶ್, ಶ್ರೀವಿದ್ಯಾ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.