ADVERTISEMENT

ಕಸ ತಂದಿದ್ದ ಕೇರಳ ಲಾರಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 5:59 IST
Last Updated 19 ಜುಲೈ 2019, 5:59 IST
ಕೇರಳದಿಂದ ಮೈಸೂರು ನಗರಕ್ಕೆ ಕಸವನ್ನು ತಂದ ಲಾರಿಯೊಂದನ್ನು ಗುರುವಾರ ರಾತ್ರಿ ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದ ತಂಡವು ವಶಕ್ಕೆ ತೆಗೆದುಕೊಂಡಿತು
ಕೇರಳದಿಂದ ಮೈಸೂರು ನಗರಕ್ಕೆ ಕಸವನ್ನು ತಂದ ಲಾರಿಯೊಂದನ್ನು ಗುರುವಾರ ರಾತ್ರಿ ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದ ತಂಡವು ವಶಕ್ಕೆ ತೆಗೆದುಕೊಂಡಿತು   

ಮೈಸೂರು: ಕಸವನ್ನು ತೆಗೆದುಕೊಂಡು ಬಂದಿದ್ದ ಕೇರಳದ ಲಾರಿಯೊಂದನ್ನು ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದ ಪಾಲಿಕೆ ಅಧಿಕಾರಿಗಳ ತಂಡವು ಗುರುವಾರ ರಾತ್ರಿ ಶಾಂತಿನಗರದ ಬಳಿ ವಶಕ್ಕೆ ತೆಗೆದುಕೊಂಡು ಚಾಲಕ ಜಾಫರ್‌ ಎಂಬಾತನನ್ನು ವಿಚಾರಣೆ ನಡೆಸಿದೆ.

ಪಾದರಕ್ಷೆ ಕಾರ್ಖಾನೆಯೊಂದಕ್ಕೆ ಈ ಕಸವನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಚಾಲಕ ತಿಳಿಸಿದ್ದಾನೆ. ಆದರೆ, ಇಲ್ಲಿನ ರಯನ್‌ ಟ್ರೇಡರ್ಸ್‌ ಮಾಲೀಕ ಹಾಕಿಬ್ ಅವರ ಜಿಎಸ್‌ಟಿ ಸಂಖ್ಯೆಯನ್ನು ಅಕ್ರಮವಾಗಿ ಈ ವ್ಯವಹಾರಕ್ಕೆ ಕೇರಳದ ರಾಜಲಕ್ಷ್ಮಿ ಟ್ರೇಡರ್ಸ್ ಬಳಕೆ ಮಾಡಿತ್ತು ಎಂಬುದು ವಿಚಾರಣೆ ವೇಳೆ ಪತ್ತೆಯಾಗಿದೆ. ಹಾಗಾಗಿ, 2 ಪ್ರತ್ಯೇಕ ದೂರು ದಾಖಲಿಸಲಾಗುವುದು ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT