ADVERTISEMENT

ಯೂತ್ ಐಕಾನ್ ಸಮ್ಮೇಳನದಲ್ಲಿ ಎಂ.ಪ್ರಿಯಾಂಕಾ ಭಾಗಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 12:26 IST
Last Updated 24 ಏಪ್ರಿಲ್ 2025, 12:26 IST
ಎಂ.ಪ್ರಿಯಾಂಕಾ
ಎಂ.ಪ್ರಿಯಾಂಕಾ   

ಎಚ್.ಡಿ.ಕೋಟೆ: ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಕಾಂ ಪದವಿಯಲ್ಲಿ ಅಧ್ಯಯನ ಮಾಡುತ್ತಿರುವ ಎಂ.ಪ್ರಿಯಾಂಕಾ ಅವರು ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾನಿಲಯ ಮೇ 15 ಮತ್ತು 16ರಂದು ನಡೆಯುವ ಯೂತ್ ಐಕಾನ್– 2025 ಅಂತರರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ಚರ್ಚಿಸಲು ಮತ್ತು ರೂಪಿಸಲು ವಿಶ್ವದಾದ್ಯಂತ ಯುವ ನಾಯಕರನ್ನು ಶಿಕ್ಷಣ ತಜ್ಞರು ನೀತಿ ನಿರೂಪಕರು ಮತ್ತು ತಜ್ಞರುಗಳನ್ನು ಒಟ್ಟುಗೂಡಿಸುವ ಉದ್ದೇಶವನ್ನು ಸಮ್ಮೇಳನ ಹೊಂದಿದೆ. ಇಲ್ಲಿ ಮುಖ್ಯ ಭಾಷಣಗಳು, ಪ್ಯಾನಲ್ ಚರ್ಚೆಗಳು ಮತ್ತು ನೆಟ್ವರ್ಕಿಂಗ್ ಅವಕಾಶಗಳನ್ನು ಸಮ್ಮೇಳನವು ಒಳಗೊಂಡಿರುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಎನ್.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT