ADVERTISEMENT

ಮೈಸೂರು: ಜ.29ರಿಂದ ‘ಮಧ್ವನವಮಿ ಉತ್ಸವ’

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 16:06 IST
Last Updated 27 ಜನವರಿ 2023, 16:06 IST

ಮೈಸೂರು: ನಗರದ ಕೃಷ್ಣಮೂರ್ತಿಪುರಂನಲ್ಲಿರುವ ವ್ಯಾಸತೀರ್ಥ ವಿದ್ಯಾಪೀಠದಲ್ಲಿ (ಸೋಸಲೆ ವ್ಯಾಸರಾಜರ ಮಠ) ಜ.29 ಹಾಗೂ 30ರಂದು ‘ಮಧ್ವನವಮಿ ಉತ್ಸವ’ದ ಪ್ರಯುಕ್ತ ವಿವಿಧ ಕಾರ್ಯಕ್ರಮ ಮತ್ತು ವಿಚಾರ ಗೋಷ್ಠಿ ನಡೆಯಲಿದೆ.

29ರಂದು ಬೆಳಿಗ್ಗೆ 9.30ಕ್ಕೆ ಸೋಸಲೆ ವ್ಯಾಸರಾಜ ಮಠಾಧೀಶ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಂತರ ‘ವಾಕ್ಯಾರ್ಥ ಗೋಷ್ಠಿ’ ನಡೆಯಲಿದ್ದು, ವಿದ್ವಾಂಸರಾದ ಶೇಷಗಿರಿ ಆಚಾರ್ಯ, ಸಿ.ಎಚ್. ಶ್ರೀನಿವಾಸಮೂರ್ತಿ, ಬಂಡಿ ಶ್ಯಾಮಾಚಾರ್ಯ, ಎಲ್.ಎನ್. ಸುಧೀಂದ್ರ ಆಚಾರ್ಯ, ಸತ್ತೇಗಿರಿ ವಾಸುದೇವಾಚಾರ್ಯ, ಪ್ರದ್ಯುಮ್ನಾಚಾರ್ಯ ಮತ್ತು ನಾಗಸಂಪಿಗೆ ಕೃಷ್ಣಾಚಾರ್ಯ ವಾಕ್ಯಾರ್ಥ ಮಾಡಲಿದ್ದಾರೆ. ನಂತರ ವಿದ್ಯಾರ್ಥಿಗಳಾದ ಸರ್ವಜ್ಞ, ಶ್ರೀಹರಿ, ಶ್ರೀಶ ಆಚಾರ್ಯ ಮತ್ತು ಸೌಮಿತ್ರಿ ಆಚಾರ್ಯ ತತ್ವೋದೇಶ-ನ್ಯಾಯಾಮೃತದ ಬಗ್ಗೆ ಮಾತನಾಡಲಿದ್ದಾರೆ.

ಮಧ್ಯಾಹ್ನ 2ಕ್ಕೆ ‘ಅನುವಾದ ವಾಕ್ಯಾರ್ಥ ಸಭಾ’ ನಡೆಯಲಿದೆ. ನ್ಯಾಯಸುಧಾ ಮತ್ತು ತಾತ್ಪರ್ಯ ಚಂದ್ರಿಕಾ ಬಗ್ಗೆ ಪ್ರಣವ ಮತ್ತು ಸುಘೋಷ ವಿಷಯ ಮಂಡಿಸಲಿದ್ದಾರೆ. ಸಂಜೆ 6ಕ್ಕೆ ‘ದಾರ್ಶನಿಕ ಪ್ರಪಂಚದಲ್ಲಿ ಮಧ್ವಾಚಾರ್ಯರು’ ವಿಷಯದ ಬಗ್ಗೆ ವಿದ್ಯಾಪೀಠದ ಪ್ರಾಚಾರ್ಯ ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ, ವಿದ್ವಾನ್ ಕೃಷ್ಣಾಚಾರ್ಯ ಮತ್ತು ಶ್ರೀನಿವಾಸಮೂರ್ತಿ ಆಚಾರ್ಯರು ಪ್ರವಚನ ನೀಡಲಿದ್ದಾರೆ.

ADVERTISEMENT

30ರಂದು ಬೆಳಿಗ್ಗೆ 7ಕ್ಕೆ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಾಮೂಹಿಕ ಮಧ್ವವಿಜಯದ ಪಾರಾಯಣ, ಪವಮಾನ ಹೋಮ, ವಾಯುಸ್ತುತಿ ಪುನಶ್ಚರಣೆ ಕಾರ್ಯಕ್ರಮವಿದೆ. ಬೆಳಿಗ್ಗೆ 10ಕ್ಕೆ ‘ಮಧ್ವಾಚಾರ್ಯರ ಸೂಕ್ತಿ’ ಬಗ್ಗೆ ಪಂಡಿತರಾದ ಬಿದರಹಳ್ಳಿ ಕೃಷ್ಣಾಚಾರ್ಯ ಮತ್ತು ಕಳಸಾಪುರ ಶ್ರೀಕಾಂತಾ ಚಾರ್ಯ ಪ್ರವಚನ ನೀಡಲಿದ್ದಾರೆ. ನಂತರ ವಿದ್ಯಾಶ್ರೀಶ ತೀರ್ಥರಿಂದ ಸಂಸ್ಥಾನಪೂಜೆ ನೆರವೇರಲಿದೆ.

ಮಧ್ಯಾಹ್ನ 3ಕ್ಕೆ ವಾಕ್ಯಾರ್ಥ ಸಭೆ ಜರುಗಲಿದೆ. ಸಂಜೆ 6ಕ್ಕೆ ಉಪನ್ಯಾಸ, ಶ್ರೀಗಳ ಅನುಗ್ರಹ ಸಂದೇಶ, ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಅಷ್ಟಾವಧಾನ ಕಾರ್ಯಕ್ರಮವಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 98459 13198 ಸಂಪರ್ಕಿಸಬಹುದು ಎಂದು ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ.ಡಿ.ಪಿ.ಮಧುಸೂದನಾಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.