ADVERTISEMENT

ತಿ. ನರಸೀಪುರ ತ್ರಿವೇಣಿ ಸಂಗಮದಲ್ಲಿ ಮಾಘ ಸ್ನಾನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 13:34 IST
Last Updated 23 ಫೆಬ್ರುವರಿ 2025, 13:34 IST
ತಿ.ನರಸೀಪುರ‌ ಪಟ್ಟಣದ ತ್ರಿವೇಣಿ ಸಂಗಮದಲ್ಲಿ ಶನಿವಾರ ನೂರಾರು ಮಂದಿ ಮಾಘ ಸ್ನಾನ ಮಾಡಿದರು
ತಿ.ನರಸೀಪುರ‌ ಪಟ್ಟಣದ ತ್ರಿವೇಣಿ ಸಂಗಮದಲ್ಲಿ ಶನಿವಾರ ನೂರಾರು ಮಂದಿ ಮಾಘ ಸ್ನಾನ ಮಾಡಿದರು   

ತಿ. ನರಸೀಪುರ: ಮಾಘ ಮಾಸದ ಕೊನೆಯ ಶನಿವಾರ ದಕ್ಷಿಣ ಭಾರತದ ಕುಂಭಮೇಳ ಕ್ಷೇತ್ರ ಪಟ್ಟಣದ ತ್ರಿವೇಣಿ ಸಂಗಮದ ಮೂರು ಸ್ನಾನ ಘಟ್ಟಗಳಲ್ಲಿ ನೂರಾರು ಜನರು ಮಾಘ ಸ್ನಾನ ಮಾಡಿದರು.

ಶನಿವಾರ ಬೆಂಗಳೂರು, ‌ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಜನರು ಅಗಸ್ತ್ಯೇಶ್ವರ, ಶ್ರೀ ಗುಂಜಾನರಸಿಂಹ ಸ್ವಾಮಿ ಹಾಗೂ ಭಿಕ್ಷೇಶ್ವರ ದೇಗುಲದ ಸ್ನಾನಘಟ್ಟಗಳಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾದರು.

ಬಳಿಕ ಸಂಗಮದ ಮಧ್ಯಭಾಗದ ನಡುಹೊಳೆ (ನಂದೀಶ್ವರ) ಬಸಪ್ಪ ಬಳಿಗೆ ತೆಪ್ಪಗಳಲ್ಲಿ ತೆರಳಿ ಅಲ್ಲಿಯೂ ಪೂಜೆ ಸಲ್ಲಿಸಿ ನಂತರ ದೇವಾಲಯಗಳಿಗೆ ಭೇಟಿ ಕೊಟ್ಟು ಅಗಸ್ತೇಶ್ವರ ಸ್ವಾಮಿ, ಕಪಿಲಾ ದಂಡೆ ಹಾಗೂ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ADVERTISEMENT
ತಿ.ನರಸೀಪುರ‌ ಪಟ್ಟಣದ ತ್ರಿವೇಣಿ ಸಂಗಮದಲ್ಲಿ ಶನಿವಾರ ನೂರಾರು ಮಂದಿ ಮಾಘ ಸ್ನಾನ ಮಾಡಿದರು
ಗುಂಜಾನರಸಿಂಹಸ್ವಾಮಿ ದೇವಾಲಯದಲ್ಲಿ ದೇವರ ದರ್ಶನ ಕ್ಕೆ ಬಂದ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.