ADVERTISEMENT

ಸಾ.ರಾ.ಮಹೇಶ್ ಬಂಧನ ಖಂಡಿಸಿ ಆತ್ಮಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 16:01 IST
Last Updated 9 ಆಗಸ್ಟ್ 2024, 16:01 IST
ಕೆ.ಆರ್.ನಗರ ಗರುಡಗಂಬ ವೃತ್ತದಲ್ಲಿ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಅವರ ಬಂಧನ ಖಂಡಿಸಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ಮಾಡಿದರು. ರುದ್ರೇಶ್ ಅವರು ಪೆಟ್ರೋಲ್ ತುಂಬಿದ್ದ ಬಾಟಲ್ ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು
ಕೆ.ಆರ್.ನಗರ ಗರುಡಗಂಬ ವೃತ್ತದಲ್ಲಿ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಅವರ ಬಂಧನ ಖಂಡಿಸಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ಮಾಡಿದರು. ರುದ್ರೇಶ್ ಅವರು ಪೆಟ್ರೋಲ್ ತುಂಬಿದ್ದ ಬಾಟಲ್ ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು   

ಕೆ.ಆರ್.ನಗರ: ಮೈಸೂರಿನಲ್ಲಿ ಪ್ರತಿಭಟನೆನಿರತ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಅವರ ಬಂಧನ ಖಂಡಿಸಿ ಪಕ್ಷದ ನಗರ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಶುಕ್ರವಾರ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.

ಇಲ್ಲಿನ ಗರುಡಗಂಬ ವೃತ್ತದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಾ.ರಾ.ಮಹೇಶ್ ಬಂಧನ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ರುದ್ರೇಶ್ ಅವರು ಪೆಟ್ರೋಲ್ ತುಂಬಿದ್ದ ಬಾಟಲ್ ಹಿಡಿದುಕೊಂಡು ಪ್ರತಿಭಟಿಸುತ್ತಿದ್ದರು.

ಪ್ರತಿಭಟನೆ ಅಂತಿಮ ಹಂತದಲ್ಲಿ ಪ್ರತಿಭಟನಾಕಾರರೊಂದಿಗೆ ಪೊಲೀಸರು ಮಾತನಾಡುವಾಗ, ಏಕಾ ಏಕೀ ಆವೇಶಕ್ಕೆ ಒಳಗಾದ ರುದ್ರೇಶ್ ಪೆಟ್ರೋಲ್ ಮೈಮೇಲೆ ಎರಚಿಕೊಂಡರು. ಅಕ್ಕಪಕ್ಕದಲ್ಲಿ ನಿಂತಿದ್ದ ಹಲವು ಪ್ರತಿಭಟನಾಕಾರರ ಮೇಲೂ ಪೆಟ್ರೋಲ್ ಸಿಡಿಯಿತು. ರುದ್ರೇಶ್ ಸೇರಿದಂತೆ ಹಲವರ ಕಣ್ಣಿಗೆ ಪೆಟ್ರೋಲ್‌ ಬಿದ್ದ ಕಾರಣ ಕಣ್ಣು ಉರಿಯಿಂದ ಪರಿತಪಿಸಿದರು.

ADVERTISEMENT

ಬಳಿಕ ರುದ್ರೇಶ್ ಮಾತನಾಡಿ, ‘ಕಾಂಗ್ರೆಸ್‌ನ ಕೈಗೊಂಬೆಯಾಗಿರುವ ಪೊಲೀಸರು ಏಕಾ ಏಕೀ ಸಾ.ರಾ.ಮಹೇಶ್ ಅವರನ್ನು ಮೈಸೂರಿನಲ್ಲಿ ಬಂಧಿಸಿದ್ದಾರೆ. ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡುವಾಗ ನೋವು ಸಹಿಸಿಕೊಳ್ಳಲಾಗದೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದೆ. ಆದರೆ, ಜೊತೆಯಲ್ಲಿದ್ದ ಕಾರ್ಯಕರ್ತರು ಅದಕ್ಕೆ ಅವಕಾಶ ಕೊಡಲಿಲ್ಲ. ಸಾ.ರಾ.ಮಹೇಶ್ ಅವರು ಕೂಡ ದೂರವಾಣಿ ಕರೆ ಮಾಡಿ ಹಾಗೆಲ್ಲ ಮಾಡುವುದು ಬೇಡ ಎಂದು ಹೇಳಿದರು. ಅವರ ಮಾತಿಗೆ ಬೆಲೆ ಕೊಟ್ಟು ಹಿಂದೆ ಸರಿದಿದ್ದೇನೆ. ಮತ್ತೆ ಅವರ ಬಂಧನವಾದರೆ ಮುಂದಿನ ಪ್ರತಿಭಟನೆ ಮತ್ತಷ್ಟು ಭಿನ್ನವಾಗಿರುತ್ತೆ’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಹೊಸಹಳ್ಳಿ ವೆಂಕಟೇಶ್, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ಪ್ರಭಾಕರ್ ಜೈನ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದ್ರಾಕ್ಷಾಯಿಣಿ, ಪುರಸಭೆ ಸದಸ್ಯರಾದ ಉಮೇಶ್, ಕೆ.ಎಲ್.ಜಗದೀಶ್, ಸಂತೋಷ್ ಗೌಡ, ತೋಂಟದಾರ್ಯ, ಮುಖಂಡರಾದ ಹಂಪಾಪುರ ಸುರೇಶ್, ಲಾಳನಹಳ್ಳಿ ಮಹೇಶ್, ಎಚ್.ಪಿ.ಶಿವಣ್ಣ, ಜೀವನ್, ಮಾರ್ಕಂಡಯ್ಯ, ರೂಪಾ ಸತೀಶ್, ಭಾಗ್ಯಾ, ಮೋಹನಕುಮಾರಿ, ರಾಜೇಶ್ವರಿ, ಶೃತಿ, ಹರೀಶ್, ರಘು, ಮಂಜು, ಚಿಕ್ಕವೀರು, ಶಿವಾಜಿ. ಬಂಗಾರಿ, ವಿಕಾಸ್ ಭಾಗವಹಿಸಿದ್ದರು.

ಕೆ.ಆರ್.ನಗರ ಗರುಡಗಂಬ ವೃತ್ತದಲ್ಲಿ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಅವರ ಬಂಧನ ಖಂಡಿಸಿ ಶುಕ್ರವಾರ ನಡೆದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ರುದ್ರೇಶ್ ಅವರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.