ADVERTISEMENT

ಉರುಳಿಗೆ ಗಂಡು ಚಿರತೆ ಬಲಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 4:02 IST
Last Updated 10 ಆಗಸ್ಟ್ 2020, 4:02 IST
ಉರುಳಿಗೆ ಸಿಲುಕಿ ಮೃತಪಟ್ಟ ಚಿರತೆ
ಉರುಳಿಗೆ ಸಿಲುಕಿ ಮೃತಪಟ್ಟ ಚಿರತೆ   

ಹನಗೋಡು: ಐದು ವರ್ಷದ ಗಂಡು ಚಿರತೆಯೊಂದು ಬೇಲಿಯ ಉರುಳಿಗೆ ಸಿಲುಕಿ ಹುಣಸೂರು ವಲಯದ ಮುದ್ದನಹಳ್ಳಿ ವ್ಯಾಪ್ತಿಯಲ್ಲಿ ಮೃತಪಟ್ಟಿದೆ.

ದಾರಿಹೋಕರು ಚಿರತೆ ನೋಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹುಣಸೂರು - ತಿತಿಮತಿ ಮುಖ್ಯ ರಸ್ತೆಯ ಮುದ್ದನಹಳ್ಳಿ ಗಸ್ತು ವ್ಯಾಪ್ತಿಯಲ್ಲಿ ಬರುವ ಉತ್ತೇನಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿ ತಂತಿ ಬೇಲಿಗೆ ಉರುಳು ಕಟ್ಟಲಾಗಿತ್ತು.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿಸಿಎಫ್‌ ಮಹೇಶ್‌ ಕುಮಾರ್‌, ಎಸಿಎಫ್ ಸತೀಶ್, ಆರ್‌ಎಫ್‌ಒ ಹನುಮಂತರಾಜು, ಡಿಆರ್‌ಎಫ್ಒ ಸಿದ್ದರಾಜು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಾಮನಿರ್ದೇಶನ ಸದಸ್ಯ ವೆಂಕಟ ನಾಯ್ಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಶುವೈದ್ಯ ಡಾ.ರೆಹಮಾನ್ ಮುಜೀಬ್ ಚಿರತೆಯ ಶವ ಪರೀಕ್ಷೆ ನಡೆಸಿದರು. ನಂತರ ಅರಣ್ಯದಲ್ಲಿ ಬೆಂಕಿಯಿಂದ ಸುಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.