ADVERTISEMENT

ಹಂಪಾಪುರ: ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:49 IST
Last Updated 10 ಫೆಬ್ರುವರಿ 2026, 5:49 IST
ಹಂಪಾಪುರ ಸಮೀಪದ ಮಾದಾಪುರದ ಚಂದ್ರಮೌಳೇಶ್ವರ ಬೆಟ್ಟದಲ್ಲಿ ಮಲ್ಲಿಕಾರ್ಜುನ ದೇವಾಲಯವು ಸೋಮವಾರ ವಿದ್ಯುತ್ ದೀಪಗಳಿಂದ ಕಂಗೊಳಿಸಿತು
ಹಂಪಾಪುರ ಸಮೀಪದ ಮಾದಾಪುರದ ಚಂದ್ರಮೌಳೇಶ್ವರ ಬೆಟ್ಟದಲ್ಲಿ ಮಲ್ಲಿಕಾರ್ಜುನ ದೇವಾಲಯವು ಸೋಮವಾರ ವಿದ್ಯುತ್ ದೀಪಗಳಿಂದ ಕಂಗೊಳಿಸಿತು   

ಹಂಪಾಪುರ: ಹೋಬಳಿಯ ಮಾದಾಪುರದ ಬೆಟ್ಟದಲ್ಲಿ ಮೂರು ದಿನಗಳ ಕಾಲ ನಡೆಯುವ ಚಂದ್ರಮೌಳೇಶ್ವರ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಬೆಳಿಗ್ಗೆ 5ರ ಶುಭ ಲಗ್ನದಲ್ಲಿ ಹೋಮ, ಹವನ, ರುದ್ರಾಭಿಷೇಕಾ, ಶಿವನಿಗೆ ಪ್ರಿಯವಾದ ಸಹಸ್ರ ಬಿಲ್ವಾರ್ಚನೆ ನಡೆಯಿತು.

ಪೂಜಾ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದರು. ಹಬ್ಬದ ಅಂಗವಾಗಿ ಗ್ರಾಮಸ್ಥರು ಮನೆಯಂಗಳ ಶುಚಿಗೊಳಿಸಿ ರಂಗೋಲಿ ಬಿಡಿಸಿ, ತಳಿರು ತೋರಣ ಕಟ್ಟಿ‌ ಶೃಂಗರಿಸಿದ್ದರು.

ADVERTISEMENT

ಮಕ್ಕಳು ಹೊಸ ದಿರಿಸಿನೊಂದಿಗೆ ಕಂಗೊಳಿಸಿದರು. ಪೋಷಕರೊಂದಿಗೆ ಬೆಟ್ಟವನ್ನೇರಿ ಮಲ್ಲಿಕಾರ್ಜುನ ದೇವಾಲಯಕ್ಕೆ‌ ತೆರಳಿ‌ ದೇವರ ದರ್ಶನ ಪಡೆದರು.

ರಾತ್ರಿ ದೇವಾಲಯದ ಸಮೀಪದಲ್ಲೇ ಹರಿಯುವ ಕಪಿಲಾ ನದಿಯಿಂದ ನಂದಿಧ್ವಜ, ವೀರಗಾಸೆ, ಮಂಗಳವಾದ್ಯ, ಪೂಜಾಕುಣಿತ, ಚಂಡೆವಾದ್ಯ, ತಮಟೆಗಳೊಂದಿಗೆ ಹಾಲರವಿ ಸೇವೆ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.