ADVERTISEMENT

ಮೈಸೂರು: ಪತ್ನಿಯ ಕತ್ತು ಸೀಳಿ ಕೊಂದ ಪತಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 11:41 IST
Last Updated 16 ಅಕ್ಟೋಬರ್ 2025, 11:41 IST
   

ಮೈಸೂರು: ನಗರದ ಹೊರವಲಯದ ಇಲವಾಲ ಬಳಿಯ ಜಟ್ಟಿಹುಂಡಿಯಲ್ಲಿ ಪತಿಯು ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಸವಿತಾ (35) ಕೊಲೆಯಾದ ಮಹಿಳೆ. ‘ಸವಿತಾ ಜಟ್ಟಿಹುಂಡಿ ಸಂತ ಜೋಸೆಫ್‌ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದು, ಗುರುವಾರ ಆಶ್ರಮದ ಗೇಟ್‌ ಬಳಿ ಆಕೆಯ ಗಂಡ ದೇವರಾಜ್‌ ಜಗಳ ಮಾಡಿದ್ದು, ನಂತರ ಸವಿತಾ ಅವರ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT