ADVERTISEMENT

ಮೈಸೂರು: ಸೌಹಾರ್ದಕ್ಕೆ ಸಾಕ್ಷಿಯಾದ ಮದುವೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಸಿಯಾ ಬೇಗಂ– ನಿರಂಜನ್‌ ಎಸ್‌.ಹಿರೇಮಠ್

​ಪ್ರಜಾವಾಣಿ ವಾರ್ತೆ
Published 30 ಮೇ 2022, 8:49 IST
Last Updated 30 ಮೇ 2022, 8:49 IST
ಮೈಸೂರಿನಲ್ಲಿ ಶುಕ್ರವಾರ ವಿಶೇಷ ವಿವಾಹ ಕಾಯ್ದೆ ಅಡಿ ಮದುವೆಯಾದ ಎಐಡಿಎಸ್‌ಓ ಜಿಲ್ಲಾ ಉಪಾಧ್ಯಕ್ಷೆ ಆಸಿಯಾ ಬೇಗಂ ಮತ್ತು ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ನಿರಂಜನ್‌ ಎಸ್‌.ಹಿರೇಮಠ್ ಅವರೊಂದಿಗೆ ನಿರಂಜನ್‌ ಪೋಷಕರಾದ ಶಿವಾನಂದಯ್ಯ ಸ್ವಾಮಿ–ಶಶಿಕಲಾ ದಂಪತಿ, ಎಸ್‌ಯುಸಿಐಸಿ ರಾಜ್ಯ ಕಾರ್ಯದರ್ಶಿ ಕೆ.ಉಮಾದೇವಿ, ಎಸ್‌ಯುಸಿಐಸಿ ಜಿಲ್ಲಾ ಸಮಿತಿ ಸದಸ್ಯೆ ಸಂಧ್ಯಾ, ನಿರಂಜನ್ ಅಕ್ಕ ಭಾವ ವಿಜಯಶ್ರೀ–ಪ್ರವೀಣ್‌ ಇದ್ದಾರೆ.

ಮೈಸೂರು: ನಗರದಲ್ಲಿ ಶುಕ್ರವಾರ ಎಐಡಿಎಸ್‌ಓ ಜಿಲ್ಲಾ ಉಪಾಧ್ಯಕ್ಷೆ ಆಸಿಯಾ ಬೇಗಂ ಮತ್ತು ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ನಿರಂಜನ್‌ ಎಸ್‌.ಹಿರೇಮಠ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೋಮು ಸೌಹಾರ್ದಕ್ಕೆ ಸಾಕ್ಷಿಯಾದರು.

ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಮಧ್ಯಾಹ್ನ ನೋಂದಣಿ ಮಾಡಿಕೊಂಡ ಈ ಇಬ್ಬರ ಮದುವೆಯ ಔತಣಕೂಟದಲ್ಲಿ ಪಾಲ್ಗೊಂಡ ವಿವಿಧ ಸಂಘಟನೆಗಳ ಮುಖಂಡರು, ‘ಸೌಹಾರ್ದ ಪರಂಪರೆ ಮುಂದುವರಿಯಲಿ’ ಎಂದು ಶುಭ ಹಾರೈಸಿದರು.

‘ಕೋಮು ಸಾಮರಸ್ಯಕ್ಕೆ ಹಲವು ಅಡೆತಡೆಗಳು ಎದುರಾಗುತ್ತಿರುವ ಹೊತ್ತಿನಲ್ಲಿ ನಡೆದಿರುವ ಮದುವೆ ಕರ್ನಾಟಕದ ಮಟ್ಟಿಗೆ ಪ್ರಮುಖ ಘಟನೆ. ಸಾಮಾಜಿಕ ಸಾಮರಸ್ಯ ಮತ್ತು ದಾಂಪತ್ಯ ಸಾಮರಸ್ಯಕ್ಕೆ ದಂಪತಿಯು ಮಾದರಿಯಾಗಲಿ. ಅವರಿಗೆ ಎಲ್ಲರ ಬೆಂಬಲ ದೊರಕಲಿ’ ಎಂದು ಕನ್ನಡ ಪರ ಹೋರಾಟಗಾರ ಪ.ಮಲ್ಲೇಶ್‌, ಎಐಯುಟಿಯುಸಿ ಮುಖಂಡ ಶೇಷಾದ್ರಿ, ಲೇಖಕಿ ಲತಾ, ರೈತ ಸಂಘದ ಮುಖಂಡ ಹೊಸಕೋಟೆ ಬಸವರಾಜ್ ಪ್ರತಿಪಾದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.