
ತಿ.ನರಸೀಪುರ: ಮರುಡೇಶ್ವರ ಸ್ವಾಮಿಯವರ ನಾಗಾಭರಣ ಸಹಿತ ಕೊಳಗದ ಜಂಬೂಸವಾರಿ ಉತ್ಸವವು ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಕಾವೇರಿ ನದಿ ತಟದಲ್ಲಿರುವ ಶ್ರೀಮರಡೇಶ್ವರ ಸ್ವಾಮಿ ಕ್ಷೇತ್ರವು ಹಲವಾರು ವಿಶೇಷತೆಗಳನ್ನು ಹೊಂದಿದ್ದು, ಭಕ್ತರ ನಂಬಿಕೆಯ ವಿಶೇಷ ಪುಣ್ಯ ಕ್ಷೇತ್ರವೆನಿಸಿದೆ. ಈ ಕ್ಷೇತ್ರದಲ್ಲಿ ನೆಲೆಸಿರುವ ಮರುಡೇಶ್ವರ ಸ್ವಾಮಿಯವರ ನಾಗಾಭರಣ ಸಹಿತ ಕೊಳಗದ ಜಂಬೂಸವಾರಿ ಉತ್ಸವದಲ್ಲಿ ಗಣೇಶ, ಮುರುಡೇಶ್ವರ ಸ್ವಾಮಿ ಉತ್ಸವ ಮೂರ್ತಿಯ ಕುದುರೆ ವಾಹನ ಉತ್ಸವವು ಸಹಸ್ರಾರು ಭಕ್ತರ ಸಂಭ್ರಮದೊಂದಿಗೆ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತ ಸಾಗರದ ನಡುವೆ ನಡೆದ ಉತ್ಸವದಲ್ಲಿ ಭಾಗಿಯಾದ ಭಕ್ತರು ದೇವರಿಗೆ ಭಕ್ತಿ ಅರ್ಪಿಸಿದರು
ಶ್ರೀ ಮರುಡೇಶ್ವರ ಸ್ವಾಮಿ ಸಮಿತಿಯ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕಳೆದ 30 ವರ್ಷಗಳ ಹಿಂದೆ ಮಾದಾಪುರ ಗ್ರಾಮದಲ್ಲಿ ಇದೇ ರೀತಿ ಜಂಬೂ ಸವಾರಿಯಲ್ಲಿ ಸ್ವಾಮಿಯವರ ಉತ್ಸವ ನಡೆದಿದ್ದನ್ನು ಇಲ್ಲಿ ಸ್ಮರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.