
ಪ್ರಜಾವಾಣಿ ವಾರ್ತೆಜಯಪುರ (ಮೈಸೂರು ಜಿಲ್ಲೆ): ಮೈಸೂರು ತಾಲ್ಲೂಕಿನ ಜಯಪುರದಲ್ಲಿ ಜಾಮಿಯಾ ಮಸೀದಿ ನಿರ್ಮಾಣ ಕಾರ್ಯಕ್ಕೆ ಗ್ರಾಮದ ಹಿಂದೂ ಮುಖಂಡರು ಶನಿವಾರ ₹50 ಸಾವಿರ ದೇಣಿಗೆ ನೀಡಿದರು.
ಮಸೀದಿ ಅಧ್ಯಕ್ಷ ಮಹಮ್ಮದ್ ಆಲಿ, ಕಾರ್ಯದರ್ಶಿ ಅಬ್ದುಲ್ ಮುತಾಲೀಫ್ ಅವರಿಗೆ ಮುಖಂಡರಾದ ಜವರನಾಯಕ, ಮಲ್ಲಪ್ಪ, ಮೂಗನಾಯಕ, ಡೇರಿ ಬಸವರಾಜು, ಕೆಂಪನಾಯಕ, ನಾಗರಾಜು, ರೇಣುಕಾ ದೇಣಿಗೆ ಹಸ್ತಾಂತರಿಸಿದರು. ಮೌಲ್ವಿಗಳಾದ ಮಸಿವುಲ್ಲಾ, ಜಿಯಾವುಲ್ಲಾ, ಸುಜಾತ್ ಆಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.