ADVERTISEMENT

ಮೈಸೂರು: ಮತ್ಸ್ಯ ಸಂಜೀವಿನಿ ಯೋಜನೆ ತರಬೇತಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 6:59 IST
Last Updated 20 ಡಿಸೆಂಬರ್ 2025, 6:59 IST
ತರಬೇತಿಯಲ್ಲಿ ಪಾಲ್ಗೊಂಡವರು
ತರಬೇತಿಯಲ್ಲಿ ಪಾಲ್ಗೊಂಡವರು   

ಮೈಸೂರು: ಮತ್ಸ್ಯ ಸಂಜೀವಿನಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಹಾಗೂ ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ತಾಲ್ಲೂಕಿನ ನಾಗನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ವಸತಿಸಹಿತ ತರಬೇತಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಉದ್ಘಾಟಿಸಿದ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಜಿ.ಎಸ್., ‘ಮೀನುಗಾರಿಕೆ ವೃತ್ತಿಯಿಂದ ಬಹಳ ಅನುಕೂಲ ಇದೆ. ತರಬೇತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಕೃಷಿ ಕೇಂದ್ರದ ವಿಜ್ಞಾನಿ ಸಿ. ರಾಮಚಂದ್ರ, ಜಿಲ್ಲಾ ಪಂಚಾಯಿತಿ ಕಾರ್ಯಕ್ರಮ ವ್ಯವಸ್ಥಾಪಕಿ ಆಶಾ ಎ.ಆರ್., ಜಿಲ್ಲಾ ಯುವ ವೃತ್ತಿಪರ ಖಾದರ್, ತಾಲ್ಲೂಕು ಸಹಾಯಕ ನಿರ್ದೇಶಕಿ ಭವಾನಿ ಸಿ.ಎನ್., ಎಚ್.ಡಿ. ಕೋಟೆ ಹಾಗೂ ಸಾಲಿಗ್ರಾಮ ತಾಲ್ಲೂಕಿನ ಸಹಾಯಕ ನಿರ್ದೇಶಕ ಶಿವರಂಜನ್ ಎಚ್.ಯು., ಸಂಪನ್ಮೂಲ ವ್ಯಕ್ತಿಗಳು, ಮೈಸೂರು ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಬಿ.ಆರ್. ನಾಗರಾಜು ಹಾಜರಿದ್ದರು.

ADVERTISEMENT

ತರಬೇತಿಯಲ್ಲಿ ಸಾಲಿಗ್ರಾಮ, ಎಚ್.ಡಿ. ಕೋಟೆ ಹಾಗೂ ಮೈಸೂರು ತಾಲ್ಲೂಕಿನ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಲ್ಲಿನ ವಿವಿಧ ಸ್ವ ಸಹಾಯ ಸಂಘಗಳ ಮಹಿಳೆಯರು ಭಾಗವಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.