ADVERTISEMENT

ಮೈಸೂರು: ಎಂಡಿಎಂಎ ತಯಾರಿಕಾ ಘಟಕಕ್ಕೆ ಪೊಲೀಸರ ದಾಳಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 6:38 IST
Last Updated 27 ಜುಲೈ 2025, 6:38 IST
   

ಮೈಸೂರು: ನಗರದ ಹೊರವಲಯದಲ್ಲಿ ಕಾರ್ಯಾಚರಿಸುತ್ತಿದ್ದ ಎಂಡಿಎಂಎ ತಯಾರಿಕಾ ಘಟಕಕ್ಕೆ ಮಹಾರಾಷ್ಟ್ರ ಪೊಲೀಸರು ಶನಿವಾರ ರಾತ್ರಿ ದಾಳಿ ನಡೆಸಿ, ಎಂಡಿಎಂಎ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

‘ಆರೋಪಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಮಹಾರಾಷ್ಟ್ರ ಪೊಲೀಸರು ನಗರಕ್ಕೆ ಬಂದಿದ್ದು, ಸ್ಥಳೀಯ ಪೊಲೀಸರ ಸಹಾಯದಿಂದ ಮಾದಕ ವಸ್ತು ತಯಾರಿಕಾ ಘಟಕಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ದ್ರವ ರೂಪದ ವಸ್ತು ಪತ್ತೆಯಾಗಿದೆ. ಇಲ್ಲಿಂದಲೇ ಹೊರರಾಜ್ಯ ಹಾಗೂ ವಿದೇಶಗಳಿಗೆ ಮಾದಕ ವಸ್ತು ಕಳುಹಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ. ತಯಾರಿಕಾ ಘಟಕ ಇರುವ ಸ್ಥಳ ಹಾಗೂ ವಶಪಡಿಸಿಕೊಂಡ ಪ್ರಮಾಣದ ಕುರಿತು ಸ್ಥಳೀಯ ಪೊಲೀಸರು ಸ್ಪಷ್ಟಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT