ADVERTISEMENT

ಮೇಲುಕೋಟೆ ಪರ್ಕಾವಣೆಯಲ್ಲಿ ಅಧಿಕಾರಿಯ ಕುಟುಂಬದಿಂದ ನಿಯಮ ಉಲ್ಲಂಘನೆ

ಮಾಸ್ಕ್‌ ಧರಿಸದೇ ಕಿರೀಟ, ಆಭರಣ ವೀಕ್ಷಿಸಿದ ಅಧಿಕಾರಿಗಳ ಕುಟುಂಬದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 3:26 IST
Last Updated 12 ಜುಲೈ 2020, 3:26 IST
ಮೇಲುಕೋಟೆಯ ಕೃಷ್ಣರಾಜ‌ಮುಡಿ ಬ್ರಹ್ಮೋತ್ಸವದ ಪರ್ಕಾವಣೆಯಲ್ಲಿ ಅಧಿಕಾರಿಗಳ ಕುಟುಂಬದ ಸದಸ್ಯರು ಮಾಸ್ಕ್ ಧರಿಸದೇ ‌ಭಾಗವಹಿಸಿದ್ದರು
ಮೇಲುಕೋಟೆಯ ಕೃಷ್ಣರಾಜ‌ಮುಡಿ ಬ್ರಹ್ಮೋತ್ಸವದ ಪರ್ಕಾವಣೆಯಲ್ಲಿ ಅಧಿಕಾರಿಗಳ ಕುಟುಂಬದ ಸದಸ್ಯರು ಮಾಸ್ಕ್ ಧರಿಸದೇ ‌ಭಾಗವಹಿಸಿದ್ದರು   

ಮೇಲುಕೋಟೆ: ಮೇಲುಕೋಟೆಯ ಕೃಷ್ಣರಾಜ‌ಮುಡಿ ಬ್ರಹ್ಮೋತ್ಸವದಲ್ಲಿ ಮೈಸೂರು ಮೂಲದ ವಿಭಾಗೀಯ ಆಯುಕ್ತರ ಕುಟುಂಬದ ಸದಸ್ಯರು ಪರ್ಕಾವಣೆಯಲ್ಲಿ ಮಾಸ್ಕ್‌ ಧರಿಸದೆಯೇ ಭಾಗಿಯಾಗಿ ಕಿರೀಟ ಮತ್ತು ಆಭರಣ ವೀಕ್ಷಿಸಿರುವುದು ವಿವಾದಕ್ಕೆ ಕಾರಣವಾಗಿದೆ.

65 ವರ್ಷ ಮೇಲ್ಪಟ್ಟ ಅರ್ಚಕರಿಗೆ ಹಾಗೂ ಸ್ಥಾನೀಕರಿಗೆ ಖಜಾನೆಯಿಂದ ಬಂದ ಕಿರೀಟ ನೀಡಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಉತ್ಸವದ ಹಿಂದಿನ ದಿನವೇ ಮಂಡ್ಯ‌ ಜಿಲ್ಲಾ ಖಜಾನೆಯಿಂದ ಕಿರೀಟ ಆಭರಣ ತಂದು ಪರ್ಕಾವಣೆ ಮಾಡಿ ದೇವಾಲಯಕ್ಕೆ ನೀಡಿದ ಅಧಿಕಾರಿಗಳು ಸಂಪ್ರದಾಯಕ್ಕೆ ತಿಲಾಂಜಲಿ ನೀಡಿರುವ ಕ್ರಮದ ವಿರುದ್ಧ ಸಾರ್ವಜನಿಕ ವಲಯದಲ್ಲಿ‌ ಅಸಮಾಧಾನಕ್ಕೆ ಎಡೆ ಮಾಡಿದೆ.

ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿಯಂತೆ ದೇಶಿಕರ ಸನ್ನಿಧಿಯಲ್ಲಿ ಪರ್ಕಾವಣೆ ನಡೆಸುವ ನಿಯಮ ‌ಉಲ್ಲಂಘಿಸಿ ಪರ್ಕಾವಣೆಯನ್ನು‌ ಚೆಲುವ ನಾರಾಯಣಸ್ವಾಮಿ ದೇವಾಲಯದಲ್ಲಿ ‌ನಡೆಸಿದ್ದು, ಪರಕಾಲ ಮಠದ‌ ಹಕ್ಕು ಕಸಿದಂತಾಗಿದೆ ಎಂದು ಭಕ್ತರು ಆರೋಪಿಸಿದ್ದಾರೆ.

ADVERTISEMENT

ಮೊದಲ ಬಾರಿಗೆ ಪರ್ಕಾವಣೆಯ ಸುದ್ದಿ ಮಾಡಲು ಬಂದ ಮಾಧ್ಯಮದವರಿಗೂ ನಿರ್ಬಂಧ ಹಾಕಿದ ದೇಗುಲದ ಇಒ ಅಧಿಕಾರಿಗಳ ಕುಟುಂಬ ಫೋಟೋ ತೆಗೆಯಲು ಅವಕಾಶ ನೀಡಿರುವುದಕ್ಕೂ ವಿರೋಧ‌ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.