ADVERTISEMENT

ವ್ಯವಸ್ಥೆ ವಿರುದ್ಧ ಮತದಾರ ಅಕ್ರೋಶ!

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 20:56 IST
Last Updated 15 ಜೂನ್ 2022, 20:56 IST
   

ಮೈಸೂರು: ವಿಧಾನಪರಿಷತ್ ದಕ್ಷಿಣ ಪದವೀಧರರ ಚುನಾವಣೆಯ ಮತಪತ್ರದಲ್ಲಿ ಮತದಾರರೊಬ್ಬರು ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಮತ ಎಣಿಕೆ ವೇಳೆ ಕಂಡುಬಂತು.

'ದೇಶ, ರಾಜ್ಯದಲ್ಲಿ ಹಣ ಪಡೆದು ಮತ ಹಾಕುತ್ತಾ ಹೋದರೆ ಅಭಿವೃದ್ಧಿ ಆಗುವುದಿಲ್ಲ' ಎಂದು ಮತದಾರರೊಬ್ಬರು ಮತಪತ್ರದಲ್ಲಿ ಬರೆದಿದ್ದಾರೆ.

ಒಬ್ಬರು ವ್ಯವಸ್ಥೆ ಬದಲಾಗಬೇಕು ಎಂದು ಬರೆದಿದ್ದಾರೆ. ಒಬ್ಬರು ಜೆಡಿಎಸ್ ಅಭ್ಯರ್ಥಿ ಹೆಸರಿನ ಎದುರು ಅಶ್ಲೀಲ ಪದ ಬಳಸಿದ್ದಾರೆ. ಮತ್ತೊಬ್ಬರು ಕೆ.ಆರ್. ಪೇಟೆ ತಾಲ್ಲೂಕು ಘಟಕದ ಅಧ್ಯಕ್ಷರನ್ನು ಬದಲಾಯಿಸಿ ಎಂದು ಬರೆದಿದ್ದಾರೆ‌. ಮತದಾರರೊಬ್ಬರು ಪ್ರಾಶಸ್ತ್ಯದ ಮತ ನೀಡುವ ಬದಲಿಗೆ ಸಹಿ ಹಾಕಿದ್ದಾರೆ. ಕೆಲವರು ರೈಟ್ ಮಾರ್ಕ್ ಬರೆದಿರುವುದು ಕಂಡುಬಂತು. ಕ್ರಮ ಸಂಖ್ಯೆಯ ಮೇಲೂ ಕೆಲವರು ರೈಟ್ ಹಾಕಿದ್ದರು. ಇಂಥವುಗಳನ್ನು ಎಣಿಕೆ ಸಿಬ್ಬಂದಿಯು ತಿರಸ್ಕೃತ ಮತಗಳು ಎಂದು ಪರಿಗಣಿಸಿದರು.

ADVERTISEMENT

ಪದವೀಧರರೂ ಸರಿಯಾದ ಕ್ರಮದಲ್ಲಿ ಮತ ಚಲಾಯಿಸುವಲ್ಲಿ ಎಡವಿರುವುದು ತೀವ್ರ ಚರ್ಚೆಗೆ ಗ್ರಾಸವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.