ADVERTISEMENT

ಮನೆ ಹೊಂದುವ ಕನಸು ನನಸಾಗಿಸಿ: ಕೆ.ಶಿವಕುಮಾರ್

‘ನರೆಡ್ಕೊ’ ಪದಾಧಿಕಾರಿಗಳ ಪದಗ್ರಹಣದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:18 IST
Last Updated 24 ಡಿಸೆಂಬರ್ 2025, 6:18 IST
ಮೈಸೂರಿನಲ್ಲಿ ‘ನರೆಡ್ಕೊ’ ಮೈಸೂರು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಕೆ.ಶಿವಕುಮಾರ್ ಉದ್ಘಾಟಿಸಿದರು 
ಮೈಸೂರಿನಲ್ಲಿ ‘ನರೆಡ್ಕೊ’ ಮೈಸೂರು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಕೆ.ಶಿವಕುಮಾರ್ ಉದ್ಘಾಟಿಸಿದರು    

ಮೈಸೂರು: ‘ಮೈಸೂರಿನಲ್ಲಿ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ರಾಷ್ಟ್ರೀಯ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಪರಿಷತ್ತು (ನರೆಡ್ಕೊ) ಸುಧಾರಿತ ಬೆಲೆಯಲ್ಲಿ ಸಾಮಾನ್ಯರಿಗೂ ಮನೆ ಒದಗಿಸುವ ಕೆಲಸ ಮಾಡಬೇಕು’ ಎಂದು ವಿಧಾನಪರಿಷತ್ ಸದಸ್ಯ ಕೆ.ಶಿವಕುಮಾರ್ ಹೇಳಿದರು. 

ನಗರದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಪರಿಷತ್ತಿನ ಮೈಸೂರು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

‘ಕಟ್ಟಡ ಸಾಮಗ್ರಿ, ಪರಿಕರಗಳ ಬೆಲೆ ಗಗನಕ್ಕೇರಿದೆ. ಬಡವರು, ಸಾಮಾನ್ಯರು ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾನೂನು ತೊಡಕು, ವಾಜ್ಯಗಳಲ್ಲಿ ಸಿಲುಕಿ ಹೈರಾಣಾಗಿದ್ದಾರೆ. ಭ್ರಷ್ಟಾಚಾರ ಕಾರಣ ಜನರು ಮನೆ ಹೊಂದುವುದು ಕಟ್ಟವಾಗಿದೆ. ಸರ್ಕಾರವು ಪರಿಹಾರ ಒದಗಿಸಬೇಕು’ ಎಂದರು. 

ADVERTISEMENT

‘ಎರಡನೇ ಹಂತದ ನಗರಗಳಲ್ಲಿ ಸೇವೆಯನ್ನು ನರೆಡ್ಕೊ ವಿಸ್ತರಿಸಬೇಕು. ಮುಂದಿನ 10 ವರ್ಷಗಳಲ್ಲಿ ಸಿವಿಲ್ ಎಂಜಿನಿಯರ್‌ಗಳ ಕೊರತೆ ಉಂಟಾಗಲಿದೆ. ಎಂಜಿನಿಯರ್‌ಗಳ ಸೃಷ್ಟಿಗೂ ಕ್ರಮ ವಹಿಸಬೇಕು’ ಎಂದು ಸಲಹೆ ನೀಡಿದರು. 

ಪದಗ್ರಹಣ:

ನರೆಡ್ಕೊ ನೂತನ ಅಧ್ಯಕ್ಷರಾಗಿ ಎಂ.ಡಿ.ರಾಘವೇಂದ್ರ ಪ್ರಸಾದ್, ಉಪಾಧ್ಯಕ್ಷರಾಗಿ ಎ.ಪಿ. ನಾಗೇಶ್ ಅಧಿಕಾರ ಸ್ವೀಕರಿಸಿದರು. ಪಿ.ಎಸ್.ಗಗನ್ ದೀಪ್– ಕಾರ್ಯದರ್ಶಿ, ಎಸ್.ಎಚ್.ಜಗದೀಶ್– ಖಜಾಂಚಿ, ಪಿ.ನಂಜುಂಡಸ್ವಾಮಿ– ಜಂಟಿ ಕಾರ್ಯದರ್ಶಿ, ಎನ್.ದಿವ್ಯೇಶ್, ಎಸ್.ಫಣಿರಾಜ್, ಧೀರೇಂದ್ರ ಕುಮಾರ್ ಮೆಹ್ತಾ, ಎಸ್.ಮೂರ್ತಿ, ಎಂ.ವಿ.ರಾಮಪ್ರಸಾದ್, ಎಸ್.ಪಿ.ಆದರ್ಶ, ಸಿ.ವೈ.ಗಣೇಶ್ ಲಾಡ್, ಸಿ.ರಾಘವೇಂದ್ರ, ಪಿ.ಶ್ರೀನಿವಾಸ್, ಎಚ್.ಎಸ್. ವಿನೋದ್ ರಾಶಿಂಕರ್ ಆಡಳಿತ ಮಂಡಳಿ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು.

ನರೆಡ್ಕೊ ರಾಜ್ಯಾಧ್ಯಕ್ಷ ಮನೋಜ್ ಲೋಧಾ, ನಿರ್ಗಮಿತ ಅಧ್ಯಕ್ಷ ಜಿ.ಹರಿಬಾಬು ಮಾತನಾಡಿದರು. ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ನರೆಡ್ಕೊ ರಾಷ್ಟ್ರ ಘಟಕದ ಉಪಾಧ್ಯಕ್ಷ ಮುಪ್ಪ ವೆಂಕಯ್ಯ, ಚೌಧುರಿ, ಟಿ.ಜಿ.ಆದಿಶೇಷನ್ ಗೌಡ, ಜಿ.ಕೆ.ಸುಧೀಂದ್ರ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.