ADVERTISEMENT

ಮೇಲ್ಮನೆ ಸದಸ್ಯ ಡಾ.ತಿಮ್ಮಯ್ಯಗೆ ಪತ್ನಿವಿಯೋಗ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 5:41 IST
Last Updated 5 ಏಪ್ರಿಲ್ 2022, 5:41 IST
ಮೀರಾಬಾಯಿ
ಮೀರಾಬಾಯಿ   

ಮೈಸೂರು: ವಿಧಾನ ಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಅವರ ಪತ್ನಿ ಮೀರಾಬಾಯಿ (75) ಅನಾರೋಗ್ಯದಿಂದ ಸೋಮವಾರ ಮಧ್ಯಾಹ್ನ ಇಲ್ಲಿನ ಬಿಜಿಎಸ್‌– ಅಪೋಲೊ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ ಪತಿ ಡಾ. ತಿಮ್ಮಯ್ಯ, ಪುತ್ರ ಅರುಣ್‌ ಕುಮಾರ್‌, ಪುತ್ರಿಯರಾದ ಸವಿತಾ ಹಾಗೂ ಸಹನಾ ಇದ್ದಾರೆ. ಅಳಿಯ (ಸಹನಾ ಪತಿ) ಎಚ್‌.ಜಿ.ಪವಿತ್ರ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ.

ಪುತ್ರಿ ಸವಿತಾ ಬೆಹರೇನ್‌ನಲ್ಲಿ ನೆಲೆಸಿದ್ದು, ಮಂಗಳವಾರ ಬೆಳಿಗ್ಗೆ ಹೊತ್ತಿಗೆ ಮೈಸೂರಿಗೆ ಬರುವ ನಿರೀಕ್ಷೆ ಇದೆ. ಬಳಿಕ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.