ADVERTISEMENT

MUDA Scam: ಮುಡಾ ಕಚೇರಿಯಲ್ಲಿ ಮುಂದುವರಿದ ಇ.ಡಿ ಶೋಧ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯದ ತನಿಖಾ ತಂಡವು ಶನಿವಾರ ಶೋಧ ಮುಂದುವರಿಸಿದೆ.

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 6:25 IST
Last Updated 19 ಅಕ್ಟೋಬರ್ 2024, 6:25 IST
ಮುಡಾ ಕಚೇರಿ ಶೋಧ ಕಾರ್ಯ ನಡೆಸಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಒಬ್ಬೊಬ್ಬರೇ ಸಿಬ್ಬಂದಿಯನ್ನು ಕರೆಸಿ ವಿಚಾರಣೆ ನಡೆಸಿದರು –ಪ್ರಜಾವಾಣಿ ಚಿತ್ರ
ಮುಡಾ ಕಚೇರಿ ಶೋಧ ಕಾರ್ಯ ನಡೆಸಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಒಬ್ಬೊಬ್ಬರೇ ಸಿಬ್ಬಂದಿಯನ್ನು ಕರೆಸಿ ವಿಚಾರಣೆ ನಡೆಸಿದರು –ಪ್ರಜಾವಾಣಿ ಚಿತ್ರ   

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯದ ತನಿಖಾ ತಂಡವು ಶನಿವಾರ ಶೋಧ ಮುಂದುವರಿಸಿದೆ.

ಶುಕ್ರವಾರ ರಾತ್ರಿ ಮುಡಾ ಕಚೇರಿ ಒಳಗೇ ತಂಗಿದ್ದ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಶನಿವಾರ ಬೆಳಿಗ್ಗೆಯಿಂದಲೇ ತನಿಖೆ ಮುಂದುವರಿಸಿದ್ದಾರೆ. ಕಚೇರಿಯ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದ್ದು, ಒಳಗೆ ತನಿಖಾ ತಂಡವು 50:50 ನಿವೇಶನ ಹಂಚಿಕೆಗೆ ಸಂಬಂಧಿಸಿದ ಪ್ರತಿ ಮಾಹಿತಿಯನ್ನೂ ಕಲೆಹಾಕುತ್ತಿದೆ. ಈ ಸಂದರ್ಭ ಕೆಲವು ಮೂಲ ದಾಖಲೆಗಳು ನಾಪತ್ತೆ ಆಗಿದ್ದು, ಆ ಸಂಬಂಧ ಅಧಿಕಾರಿಗಳನ್ನು ಇ.ಡಿ. ಪ್ರಶ್ನಿಸಿದೆ ಎನ್ನಲಾಗಿದೆ.

ಮುಡಾದ ಹಿಂದಿನ ಆಯುಕ್ತರಾದ ಜಿ.ಟಿ. ದಿನೇಶ್‌ಕುಮಾರ್‌ ಹಾಗೂ ಡಿ.ಬಿ. ನಟೇಶ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.