ADVERTISEMENT

ರೈತರಿಗೆ ಪ್ಯಾಕೇಜ್‌ ಘೋಷಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಮೇ 2020, 10:22 IST
Last Updated 7 ಮೇ 2020, 10:22 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಮೈಸೂರು: ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕೂಡಲೇ ಪ್ಯಾಕೇಜ್‌ ಘೋಷಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.

‘ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾಗಿರುವ ದುಡಿಯುವ ವರ್ಗದ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇನೆ. ಪ್ಯಾಕೇಜ್‌ ಭಿಕ್ಷೆ ರೂಪದಲ್ಲಿ ಇರಬಾರದು. ಕನಿಷ್ಠ ನಷ್ಟ ತುಂಬಿಕೊಡುವಂತಿರಬೇಕು’ ಎಂದಿದ್ದಾರೆ.

‘ತರಕಾರಿ ಮತ್ತು ಹಣ್ಣು ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೆ ನಷ್ಟವಾಗಿದೆ. ಇದರ ನಷ್ಟ ತುಂಬಿಸಿಕೊಡಬೇಕು. ಸಾಲ ಮರುಪಾವತಿಯನ್ನು ಒಂದು ವರ್ಷದವರೆಗೆ ಮುಂದೂಡಬೇಕು. ಯಾವುದೇ ಬಡ್ಡಿ ವಿಧಿಸಬಾರದು. ಈ ಸಾಲಿನ ಕೃಷಿ ಚಟುವಟಿಕೆಗಳಿಗೆ ಬಡ್ಡಿರಹಿತ ಸಾಲ ಒದಗಿಸಬೇಕು. ನಗರಕ್ಕೆ ವಲಸೆ ಹೋಗಿದ್ದ ಕಾರ್ಮಿಕರು ಮತ್ತೆ ಊರಿಗೆ ಬಂದಿದ್ದು, ಅವರ ಉದ್ಯೋಗ ಭದ್ರತೆಗಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ ಕ್ಷೇತ್ರಕ್ಕೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಜೀವನ ನಿರ್ವಹಣೆಗಾಗಿ ಪ್ರತಿ ಕೃಷಿ ಕುಟುಂಬಕ್ಕೆ ಕನಿಷ್ಠ ₹ 10 ಸಾವಿರ ನೀಡಬೇಕು. ಕಬ್ಬಿನ ಬಾಕಿ, ವಿಮಾ ಪರಿಹಾರ ಬಾಕಿ, ಬರ ಪರಿಹಾರ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.