ಮೈಸೂರು: ಇಲ್ಲಿನ ಅವಧೂತ ದತ್ತಪೀಠದಿಂದ ಭಾರತೀಯ ಸೇನೆಗೆ ₹ 25 ಲಕ್ಷ ಕಾಣಿಕೆ ಅರ್ಪಿಸಲಾಯಿತು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಚೆಕ್ ಹಸ್ತಾಂತರಿಸಲಾಯಿತು.
ದತ್ತ ವೆಂಕಟೇಶ್ವರ ಕ್ಷೇತ್ರದ 26ನೇ ಬ್ರಹ್ಮೋತ್ಸವ ಭಾನುವಾರ ಸಂಜೆ ವೇದ ಪಾರಾಯಣಗಳ ಮೂಲಕ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು.
ಯದುವೀರ್ ಮಾತನಾಡಿ, ‘ಮೈಸೂರು ನಗರ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಪೂರಕವಾಗಿ ಸಂಸ್ಕೃತಿ ಮತ್ತು ಪರಂಪರೆ, ಗುರು ಪರಂಪರೆಯನ್ನು ಅವಧೂತ ದತ್ತಪೀಠ ಉಳಿಸಿಕೊಂಡು ಬಂದಿದೆ. ಅತ್ಯುತ್ತಮ ವಾತಾವರಣ, ಸಂಗೀತದ ವಾತಾವರಣ ಇಲ್ಲಿ ನೆಲಸಿದೆ’ ಎಂದು ಹೇಳಿದರು.
‘ಆಶ್ರಮದಿಂದ ನೀಡಿರುವ ಕಾಣಿಕೆಯನ್ನು ಸರ್ಕಾರಕ್ಕೆ ತಲುಪಿಸುತ್ತೇನೆ’ ಎಂದರು.
ನಿವೃತ್ತ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್, ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.