ಮೈಸೂರು: ನಾಡಹಬ್ಬ ದಸರೆಯ ಅಂಬಾರಿ ಆನೆ 'ಅಭಿಮನ್ಯು'ಗೆ ಭಾರ ಹೊರಿಸುವ ತಾಲೀಮು ಗುರುವಾರ ಆರಂಭವಾಗಿದೆ.
ಅರಮನೆ ಆವರಣದಲ್ಲಿನ ಆನೆಗಳ ಬಿಡಾರದಲ್ಲಿ ಡಿಸಿಎಫ್ ಡಾ.ವಿ.ಕರಿಕಾಳನ್ ಅವರು 'ಅಭಿಮನ್ಯು' ಜೊತೆ ಕುಮ್ಕಿ ಆನೆಗಳಾದ 'ಚೈತ್ರಾ', 'ಕಾವೇರಿ'ಗೂ ಪೂಜೆ ಸಲ್ಲಿಸಿ, ತಾಲೀಮಿಗೆ ಚಾಲನೆ ನೀಡಿದರು.
ಅರಮನೆಯ ಬಲರಾಮ ದ್ವಾರದಿಂದ ಬನ್ನಿಮಂಟಪದವರೆಗೆ 300 ಕೆ.ಜಿ. ತೂಕದ ಮರಳಿನ ಮೂಟೆ ಹೊತ್ತ 'ಅಭಿಮನ್ಯು' ಆನೆ ಹೆಜ್ಜೆ ಹಾಕಿದನು. ಉಳಿದ ಆನೆಗಳಾದ ಧನಂಜಯ, ಗೋಪಾಲಸ್ವಾಮಿ, ಲಕ್ಷ್ಮಿ, ಮಹೇಂದ್ರ, ಭೀಮ, ಅರ್ಜುನ ಕೂಡ ನಡಿಗೆ ತಾಲೀಮಿನಲ್ಲಿ ಭಾಗಿಯಾದವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.