ADVERTISEMENT

ಮೈಸೂರು: ಜಯಕ್ಕನ ಶವಕ್ಕೆ ಹೆಗಲು ಕೊಟ್ಟು ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಮರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 13:43 IST
Last Updated 23 ಏಪ್ರಿಲ್ 2022, 13:43 IST
   

ಮೈಸೂರು: ಇಲ್ಲಿನ ಗೌಸಿಯಾನಗರ ಬಡಾವಣೆಯ ಫಾರಂ ಕಾಲೊನಿ ನಿವಾಸಿ ಜಯಕ್ಕ (60) ಎಂಬುವವರ ಅಂತ್ಯಸಂಸ್ಕಾರಕ್ಕೆ ಮುಸ್ಲಿಮರು ಶುಕ್ರವಾರ ಹೆಗಲು ಕೊಟ್ಟು ಕೋಮು ಸೌಹಾರ್ದ ಮೆರೆದರು.

ಮೃತದೇಹವನ್ನು ಹೆಗಲಿನಲ್ಲಿ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಅವರೇ ಗುಂಡಿ ತೆಗೆದು ಹಿಂದೂ ಧರ್ಮದ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ಮಾಡಿದರು. ಮಹಿಳೆ ವಾಸವಿದ್ದ 6ನೇ ಕ್ರಾಸ್‌ ಬೀದಿಯ ಎಲ್ಲ ಮುಸ್ಲಿಮರೂ ಪಾಲ್ಗೊಂಡಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಈ ಭಾಗದ ಪಾಲಿಕೆ ಸದಸ್ಯೆ ಶಾಂತಕುಮಾರಿ, ‘ಎಲ್ಲಿಯೇ ಕೋಮು ಗಲಭೆಯಾದರೂ ಈ ಬೀದಿಯಲ್ಲಿ ಮಾತ್ರ ಶಾಂತಿ ನೆಲೆಸಿರುತ್ತದೆ. ಇಲ್ಲಿ ಕೆಲವೇ ಹಿಂದೂ ಕುಟುಂಬಗಳು ವಾಸವಿದ್ದು, ಉಳಿದವರೆಲ್ಲರೂ ಮುಸ್ಲಿಮರೇ. ಹಿಂದಿನಿಂದಲೂ ಎರಡೂ ಧರ್ಮದವರ ನಡುವೆ ಸಾಮರಸ್ಯವಿದೆ. ಯಾವುದೇ ಸಮಾರಂಭವಿದ್ದರೂ ಎಲ್ಲರೂ ಒಟ್ಟಾಗಿಯೇ ಆಚರಿಸುತ್ತಾರೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.