ADVERTISEMENT

ಮೈಸೂರು: ವಿಗ್ರಹದ ಮೇಲೆ ಬಿಜೆಪಿ ಶಾಲು, ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 17:16 IST
Last Updated 29 ಮಾರ್ಚ್ 2019, 17:16 IST
ದೇವರ ವಿಗ್ರಹದ ಮೇಲೆ ಬಿಜೆಪಿ ಶಾಲು, ಕೈಪಿಡಿ
ದೇವರ ವಿಗ್ರಹದ ಮೇಲೆ ಬಿಜೆಪಿ ಶಾಲು, ಕೈಪಿಡಿ   

ಮೈಸೂರು: ‘ಚುನಾವಣಾ ಪ್ರಚಾರದ ವೇಳೆ ಸಂಸದ ಪ್ರತಾಪಸಿಂಹ ಅವರು ದೇವರ ವಿಗ್ರಹಕ್ಕೆ ಬಿಜೆಪಿ ಶಾಲು ಹೊದಿಸಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಜೊತೆಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಪಕ್ಷವು ಚುನಾವಣಾಧಿಕಾರಿಗೆ ದೂರು ನೀಡಿದೆ.

ಸಂಸದರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌ ನೇತೃತ್ವದ ತಂಡ ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ ಅವರನ್ನು ಭೇಟಿಯಾಗಿ ಮನವಿ ಪತ್ರ ನೀಡಿದೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ಧಲಿಂಗಪುರ ಗ್ರಾಮದ ಚಂದ್ರಮೌಳೇಶ್ವರ ಸ್ವಾಮಿ ವಿಗ್ರಹದ ನಾಗರ ಹೆಡೆ ಮೇಲೆ ಬಿಜೆಪಿ ಶಾಲು ಹೊದಿಸಿ, ಐದು ವರ್ಷಗಳ ಸಾಧ ನೆಯ ಕೈಪಿಡಿ ಇಟ್ಟು ಪೂಜೆ ಸಲ್ಲಿಸಿರುವ ಫೋಟೊವನ್ನು ಬಿಡುಗಡೆ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.