ADVERTISEMENT

ಮೈಸೂರು ದಸರಾ: 'ಗ್ರಾವೆಲ್‌ ಫೆಸ್ಟ್' ಕಾರು ರೇಸ್ ರೋಮಾಂಚನ

ಚಾಲನೆ ನೀಡಿದ ನಟ ದರ್ಶನ್

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 8:03 IST
Last Updated 13 ಅಕ್ಟೋಬರ್ 2019, 8:03 IST
ಲಲಿತ್ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಆಯೋಜಿಸಿರುವ ಗ್ರಾವೆಲ್ ಫೆಸ್ಟ್ ಕಾರು ರೇಸ್ 
ಲಲಿತ್ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಆಯೋಜಿಸಿರುವ ಗ್ರಾವೆಲ್ ಫೆಸ್ಟ್ ಕಾರು ರೇಸ್    

ಮೈಸೂರು: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ದಸರಾ ಪ್ರವಾಸೋದ್ಯಮ ಉಪ ಸಮಿತಿ ಹಾಗೂ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಮೈಸೂರು ವತಿಯಿಂದ ಲಲಿತ್ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಆಯೋಜಿಸಿರುವ ಗ್ರಾವೆಲ್ ಫೆಸ್ಟ್ ಕಾರು ರೇಸ್ ಸ್ಪರ್ಧೆ ರೇಸ್ ಪ್ರಿಯರ ಮನಗೆದ್ದಿತು.

ಮೈಸೂರನ್ನು ಸಾಹಸ ಪ್ರವಾಸೋದ್ಯಮ ತಾಣವಾಗಿ ಹಾಗೂ ಮೋಟಾರ್ ಕ್ರೀಡೆಯ ತಾಣವಾಗಿ ಅಭಿವೃದ್ಧಿ ಪಡಿಸಲು ಗ್ರಾವೆಲ್ ಫೆಸ್ಟ್ ಆಯೋಜನೆ‌ ಮಾಡಲಾಗಿದೆ. ದೇಶದ,100 ಅತ್ಯುತ್ತಮ ರೇಸ್ ಚಾಲಕರು ಭಾಗಿಯಾಗಿದ್ದಾರೆ.

ನಟ ದರ್ಶನ್ ಅವರು ಗ್ರಾವೆಲ್ ಫೆಸ್ಟ್‌ಗೆಚಾಲನೆ ನೀಡಿದರು.

ADVERTISEMENT

ಒಟ್ಟು 9 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ರಾಜ್ಯ ಮಾತ್ರವಲ್ಲದೆ ದೆಹಲಿ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ರಾಜ್ಯಗಳ ಡ್ರೈವರ್’ಗಳು ಪಾಲ್ಗೊಂಡಿದ್ದಾರೆ.

1100 ಸಿಸಿ ವರಗೆ,1100 ಸಿಸಿಯಿಂದ 1400 ಸಿಸಿ ವರೆಗೆ, 1400 ಸಿಸಿಯಿಂದ 1650 ಸಿಸಿ ವರೆಗೆ, ಇಂಡಿಯನ್ ಓಪನ್ ಕ್ಲಾಸ್, ಅನ್ರಿಸ್ಟ್ರಿಕ್ಟೆಡ್ ಕ್ಲಾಸ್, ಲೇಡಿಸ್ ಕ್ಲಾಸ್, ಎಸ್‌ಯುವಿ ಕ್ಲಾಸ್ ಗಳಲ್ಲಿ ಸ್ಪರ್ಧೆ ನಡೆಯಲಿದೆ.

ಮೈಸೂರಿನ ಸ್ಥಳಿಯ 16 ಮಂದಿ ಪ್ರತಿಭೆಗಳ ಹಾಗೂ 10 ಮಹಿಳಾ ಸ್ಪರ್ಧಿಗಳು ತಮ್ಮ ಕೌಶಲ್ಯ ಪ್ರದರ್ಶನ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.