ಕರ್ನಾಟಕ ಲೋಕಾಯುಕ್ತ
ಮೈಸೂರು: ಇ-ಸ್ವತ್ತು ನೀಡಲು ನಗರ ಪಾಲಿಕೆಯ ವಲಯ ಕಚೇರಿ ನಾಲ್ಕರ ಕಂದಾಯ ಅಧಿಕಾರಿ ಎಂ.ಎನ್. ನಂದೀಶ್, ಬಿಲ್ ಕಲೆಕ್ಟರ್ ರಜಾಕ್ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಹಣ ವಶಪಡಿಸಿಕೊಂಡಿದ್ದಾರೆ.
ವಲಯ ಕಚೇರಿ ನಾಲ್ಕರಲ್ಲಿ ಸಾರ್ವಜನಿಕರೊಬ್ಬರು ಇ-ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದ್ದು, ನಂದೀಶ್ ಮತ್ತು ರಜಾಕ್ ₹25 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಹಿನ್ನಲೆಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಶನಿವಾರ ಇಬ್ಬರು ನೌಕರರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಪಿ.ಉಮೇಶ್, ಲೋಕೇಶ್, ರವಿಕುಮಾರ್, ಸಿಬ್ಬಂದಿಗಳಾದ ಆರ್.ಎನ್. ಲೋಕೇಶ್, ಎಚ್.ಎನ್. ಗೋಪಿ, ಲೋಕೇಶ್ ರಾಜೇ ಅರಸ್, ಕಾಂತರಾಜು, ಮೋಹನ್ ಗೌಡ, ಮೋಹನ್ ಕುಮಾರ್, ಲೋಕೇಶ್, ದಿನೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.