
ಮೈಸೂರು: ಇಲ್ಲಿನ ಸಮತಾ ಅಧ್ಯಯನ ಕೇಂದ್ರವು ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ವಿಜಯಾ ದಬ್ಬೆ ಸ್ಮರಣಾರ್ಥ ರಾಜ್ಯಮಟ್ಟದ ಲಲಿತ ಪ್ರಬಂಧ ಸ್ಪರ್ಧೆ ಮತ್ತು ಕವನ ಸ್ಪರ್ಧೆಯನ್ನು ಆಯೋಜಿಸಿದೆ.
ಪ್ರಬಂಧ ಸ್ಪರ್ಧೆಯಲ್ಲಿ 20ರಿಂದ40 ವಯೋಮಾನದ ಲೇಖಕಿಯರು, ಕವನ ಸ್ಪರ್ಧೆಗೆ 20 ರಿಂದ 35 ವಯೋಮಾನದ ವಿದ್ಯಾರ್ಥಿ, ಯುವಜನರು ಭಾಗವಹಿಸಬಹುದು.
ಲಲಿತ ಪ್ರಬಂಧವು 1,500 ಪದಗಳ ಮಿತಿಯಲ್ಲಿರಬೇಕು. ಕವನ ಸ್ಪರ್ಧೆಗೆ ಒಂದು ಕವನ ಕಳುಹಿಸಬೇಕು. ಎಲ್ಲಿಯೂ ಪ್ರಸಾರ/ ಪ್ರಕಟವಾಗಿರಬಾರದು. ವಯಸ್ಸಿನ ಖಚಿತತೆಗೆ ಎಸ್ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ಆಧಾರ್ ಲಗತ್ತಿಸಬೇಕು.
ಎರಡೂ ಸ್ಪರ್ಧೆಗಳಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ₹5 ಸಾವಿರ, ₹3 ಸಾವಿರ ಹಾಗೂ ₹2 ಸಾವಿರ ನಗದು ಬಹುಮಾನ ನೀಡಲಾಗುವುದು. ವಿಜೇತರು ಮತ್ತು ಮೆಚ್ಚುಗೆ ಪಡೆಯುವ ತಲಾ ಹತ್ತು ಸ್ಪರ್ಧಿಗಳಿಗೆ ಮೇ ಕೊನೆಯ ವಾರ ಒಂದು ದಿನದ ಸಾಹಿತ್ಯ ಕಮ್ಮಟ ಆಯೋಜಿಸಲಾಗುವುದು.
ಕಥೆ– ಕವನಗಳನ್ನು ಹಾಳೆಯ ಒಂದು ಮಗ್ಗುಲಲ್ಲಿ ಬರೆದು ಅಥವಾ ಟೈಪ್ ಮಾಡಿ, ಸ್ವವಿವರಗಳೊಂದಿಗೆ ವಿಜಯಾ ರಾವ್, ಮನೆ ಸಂಖ್ಯೆ 861, 14ನೇ ಮೇನ್, ವಿಜಯನಗರ ಮೊದಲನೆ ಹಂತ, ಮೈಸೂರು– 570017– ವಿಳಾಸಕ್ಕೆ ಮಾರ್ಚ್ 15ರ ಒಳಗೆ ಕಳುಹಿಸಬೇಕು ಎಂದು ಕೇಂದ್ರದ ಅಧ್ಯಕ್ಷೆ ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗೆ ಮೊಬೈಲ್ ಸಂಖ್ಯೆ 98454– 22855 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.