ADVERTISEMENT

ಮೈಸೂರು: ಸಾಮೂಹಿಕ ಸೂರ್ಯ ನಮಸ್ಕಾರ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 13:09 IST
Last Updated 4 ಫೆಬ್ರುವರಿ 2025, 13:09 IST
ಕೋಟೆ ಆಂಜನೇಯ ದೇವಸ್ಥಾನದ ಅವರಣದಲ್ಲಿ ಮೈಸೂರು ಯೋಗ ಒಕ್ಕೂಟದಿಂದ ಮಂಗಳವಾರ ಆಯೋಜಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಯೋಗಪಟುಗಳು ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ
ಕೋಟೆ ಆಂಜನೇಯ ದೇವಸ್ಥಾನದ ಅವರಣದಲ್ಲಿ ಮೈಸೂರು ಯೋಗ ಒಕ್ಕೂಟದಿಂದ ಮಂಗಳವಾರ ಆಯೋಜಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಯೋಗಪಟುಗಳು ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ   

ಮೈಸೂರು: ಇಲ್ಲಿನ ‘ಮೈಸೂರು ಯೋಗ ಒಕ್ಕೂಟ’ದ 24ನೇ ವಾರ್ಷಿಕೋತ್ಸವ ಹಾಗೂ ರಥಸಪ್ತಮಿ ಅಂಗವಾಗಿ ಅರಮನೆ ಉತ್ತರ ದ್ವಾರದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಮುಂಜಾನೆ ‘ಸಾಮೂಹಿಕ 108 ಸೂರ್ಯ ನಮಸ್ಕಾರ’ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು.

ಸಮಾಜ ಸೇವಕ ಕೆ.ರಘುರಾಂ, ಒಕ್ಕೂಟದ ಮಾಜಿ ಅಧ್ಯಕ್ಷ ಎಸ್‌.ವಿ. ವೆಂಕಟೇಶಯ್ಯ, ಸ್ವಾಸ್ಥ್ಯ ಮತ್ತು ಆಹಾರ ತಜ್ಞೆ ನಂದಿನಿ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಕೆ.ಜಿ. ದೇವರಾಜು ಮಾತನಾಡಿ, ‘ಒಕ್ಕೂಟವು 2001ರಲ್ಲಿ ಪ್ರಾರಂಭವಾಗಿದ್ದು, ಯೋಗ ಮತ್ತು ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಪ್ರತಿವರ್ಷ ರಥಸಪ್ತಮಿ ಅಂಗವಾಗಿ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ ಹಾಗೂ ಸೂರ್ಯಯಜ್ಞ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಒಕ್ಕೂಟದ ಗೌರವಾಧ್ಯಕ್ಷ ಎ.ಎಸ್. ಚಂದ್ರಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮುಖ್ಯ ಅತಿಥಿಯಾಗಿದ್ದರು. ಒಕ್ಕೂಟದ ಗೌರವಾಧ್ಯಕ್ಷ ಟಿ. ಜಲೇಂದ್ರಕುಮಾರ್‌, ಕಾರ್ಯಾಧ್ಯಕ್ಷರಾದ ಬಿ.ಪಿ. ಮೂರ್ತಿ, ಶಾಂತರಾಮ್‌, ಎಂ.ಎಸ್. ಶಿವಪ್ರಕಾಶ್‌, ಉಪಾಧ್ಯಕ್ಷರಾದ ಎಂ.ಎಸ್‌. ರಮೇಶ್‌ಕುಮಾರ್‌, ಆಶಾ ದೇವಿ, ಪ್ರಧಾನ  ಕಾರ್ಯದರ್ಶಿ ಯೋಗ ಕುಮಾರ್‌, ಖಜಾಂಚಿ ನರಸಿಂಹ, ರಾಜಶೇಖರ್‌, ಶುಭಲಕ್ಷ್ಮಿ, ಎಸ್‌. ಪುರುಷೋತ್ತಮ್‌, ಶಿಲ್ಪಾ ಪ್ರಶಾಂತ್, ಕೆ. ಚಂದ್ರು, ಕುಮುದಾ, ಮಣಿಕಂಠನ್‌, ಎಂ.ಡಿ. ರಾಜಶೇಖರಮೂರ್ತಿ ಪಾಲ್ಗೊಂಡಿದ್ದರು.

ಮೈಸೂರು ಯೋಗ ಅಸೋಸಿಯೇಷನ್‌ ಶ್ರೀರಾಮಕೃಷ್ಣ ಸೇವಾ ಪ್ರತಿಷ್ಠಾನ ಹಾಗೂ ‍ಪತಂಜಲಿ ಯೋಗ ಸಮಿತಿಯಿಂದ ರಾಮಕೃಷ್ಣ ನಗರದಲ್ಲಿ ವೃತ್ತದಲ್ಲಿ ಮಂಗಳವಾರ ನಡೆದ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಸ್ಥಳೀಯರು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.