ಪ್ರಜಾವಾಣಿ ವಾರ್ತೆ
ಮೈಸೂರು: ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶಗಳಿಗೆ ಗೌರವ ನೀಡದ ಆರೋಪದಲ್ಲಿ ಗ್ರಾಹಕರ ಆಯೋಗವು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ವಾರೆಂಟ್ ನೀಡಿದೆ.
ರಾಮಕೃಷ್ಣನಗರದ ‘ಜಿ’ ಬ್ಲಾಕ್‌ನ 8ನೇ ಅಡ್ಡ ರಸ್ತೆ ಒಳ ಚರಂಡಿ ಮತ್ತು ತೆರೆದ ಮೋರಿಗಳಲ್ಲಿನ ಹೂಳೆತ್ತಿ ಸ್ವಚ್ಛಗೊಳಿಸಿ ಸರಿಪಡಿಸಲು ಗ್ರಾಹಕ ಸಾ.ತಿ.ಸದಾನಂದ್ ಪಾಲಿಕೆ ವಿರುದ್ಧ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಆಯೋಗವು ಹೂಳೆತ್ತಿ ಸ್ವಚ್ಛಗೊಳಿಸುವಂತೆ ಪಾಲಿಕೆಗೆ ಒಂದು ತಿಂಗಳ ಗಡುವು ನೀಡಿತ್ತು, ಆದೇಶ ಪಾಲನೆಯಾಗದಿದ್ದಲ್ಲಿ ₹25 ಸಾವಿರ ದಂಡ ವಿಧಿಸಿ ಆದೇಶಿಸಿತ್ತು.
ಆದರೆ ಪಾಲಿಕೆ ಹೂಳೆತ್ತುವ ಕಾರ್ಯ ಮಾಡಿರಲಿಲ್ಲ. ಆದೇಶದ ಉಲ್ಲಂಘನೆ ಮಾಡಿದ್ದಕ್ಕಾಗಿ ಆಯೋಗವು ₹ 25 ಸಾವಿರ ದಂಡ, ₹7 ಸಾವಿರ ಪರಿಹಾರ, ₹3 ಸಾವಿರ ಪ್ರಕರಣದ ಖರ್ಚು ಪಾವತಿಸಬೇಕು ಎಂದು ಆದೇಶಿಸಿದೆ. ದೂರುದಾರರ ಪರವಾಗಿ ಪಿ.ಸತೀಶ್ ವಾದ ಮಂಡಿಸಿದ್ದಾರೆ.
₹69.67 ಲಕ್ಷ ಆನ್‌ಲೈನ್ ವಂಚನೆ
ಮೈಸೂರು: ಆನ್‌ಲೈನ್ ವಂಚನೆಯಿಂದ ಶ್ರೀರಾಂಪುರದ ನಿವಾಸಿಗಳಾಗಿರುವ ವೃದ್ಧ ದಂಪತಿ ₹ 69.67 ಲಕ್ಷ ಕಳೆದುಕೊಂಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಪರಿಚಯವಾದ ಅಪರಿಚಿತ ವ್ಯಕ್ತಿಯ ಮಾತು ನಂಬಿ ವೃದ್ಧ ದಂಪತಿ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಿದ್ದರು. ಹಣ ವಾಪಸ್ ಬಾರದೇ ಇದ್ದಾಗ ವಂಚನೆಯಾಗಿರುವುದು ಗೊತ್ತಾಗಿದೆ ಎಂದು ಸೆನ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.