ADVERTISEMENT

ಮೈಸೂರು: ರಂಜಿಸಿದ ‘ಎಂದೂ ಮರೆಯದ ಹಾಡು’

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 4:16 IST
Last Updated 27 ಡಿಸೆಂಬರ್ 2025, 4:16 IST
ಗಾನವೈದ್ಯಲೋಕ ತಂಡವು ಗುರುವಾರ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ‘ಎಂದೂ ಮರೆಯದ ಹಾಡು’ ಕಾರ್ಯಕ್ರಮವನ್ನು ಕದಂಬ ಕಲಾಪೀಠದ ಅಧ್ಯಕ್ಷ ವಿದ್ಯಾಸಾಗರ ಕದಂಬ ಉದ್ಘಾಟಿಸಿದರು
ಗಾನವೈದ್ಯಲೋಕ ತಂಡವು ಗುರುವಾರ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ‘ಎಂದೂ ಮರೆಯದ ಹಾಡು’ ಕಾರ್ಯಕ್ರಮವನ್ನು ಕದಂಬ ಕಲಾಪೀಠದ ಅಧ್ಯಕ್ಷ ವಿದ್ಯಾಸಾಗರ ಕದಂಬ ಉದ್ಘಾಟಿಸಿದರು   

ಮೈಸೂರು: ಗಾನ ವೈದ್ಯಲೋಕವು ಗುರುವಾರ ಇಲ್ಲಿನ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಎಂದೂ ಮರೆಯದ ಹಾಡು-13’– ಚಲನಚಿತ್ರ ನಟರಾದ ಶಂಕರ್‌ನಾಗ್‌ ಮತ್ತು ಅನಂತನಾಗ್‌ ಸಹೋದರರು ಅಭಿನಯಿಸಿರುವ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಸಭಿಕರನ್ನು ರಂಜಿಸಿತು.

ಕದಂಬ ಕಲಾಪೀಠದ ಅಧ್ಯಕ್ಷ ವಿದ್ಯಾಸಾಗರ ಕದಂಬ ಉದ್ಘಾಟಿಸಿದರು. ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅವರನ್ನು ಅಭಿನಂದಿಸಲಾಯಿತು.

ಗಾನ ವೈದ್ಯಲೋಕ ಸಂಸ್ಥೆ ಗೌರವಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಮುಖ್ಯಅತಿಥಿಯಾಗಿದ್ದರು. ಗಾನ ವೈದ್ಯಲೋಕ ಸಂಸ್ಥೆ ಅಧ್ಯಕ್ಷ ಡಾ.ಟಿ. ರವಿಕುಮಾರ್‌ ಪ್ರಾಸ್ತಾವಿಕ ಭಾಷಣ ಮಾಡಿದರು.

ADVERTISEMENT

ವೈ.ಡಿ. ರಾಜಣ್ಣ, ಡಾ.ಟಿ. ರವಿಕುಮಾರ್, ಡಾ.ಎ.ಎಸ್‌. ಪೂರ್ಣಿಮಾ, ಡಾ.ಶ್ಯಾಮಪ್ರಸಾದ್‌, ಸಿ.ಎಸ್‌. ವಾಣಿ, ಡಾ.ಚನ್ನ ನಾಗಪ್ಪ ಹಾಡಿದರು. ಲೇಖಕ ಎಡೆಯೂರು ಸಮೀಉಲ್ಲಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.