ADVERTISEMENT

ಮೈಸೂರು: ರೈಲು ವಸ್ತುಸಂಗ್ರಹಾಲಯದ ಪ್ರವೇಶ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 15:41 IST
Last Updated 21 ಸೆಪ್ಟೆಂಬರ್ 2022, 15:41 IST
   

ಮೈಸೂರು: ನಗರದ ಕೆಆರ್‌ಎಸ್‌ ರಸ್ತೆಯಲ್ಲಿರುವ ಮೈಸೂರು ರೈಲು ವಸ್ತುಸಂಗ್ರಹಾಲಯವನ್ನು ದಸರಾ ಅಂಗವಾಗಿ ಸೆ.26ರಿಂದ ಅ.5ರವರೆಗೆ ಪ್ರಕಾಶಮಾನ ದೀಪದ ವ್ಯವಸ್ಥೆಯೊಂದಿಗೆ ಬೆಳಗಿಸುವುದರ ಜೊತೆಗೆ, ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸುವ ಅವಧಿಯನ್ನು 20 ಗಂಟೆಗಳವರೆಗೆ ವಿಸ್ತರಿಸಲಾಗುವುದು.

‘ವಿಂಟೇಜ್ ಸ್ಟೀಮ್ ಲೊಕೊಮೊಟಿವ್‌ಗಳು, ಕೋಚ್‌ಗಳು, ವ್ಯಾಗನ್‌ಗಳು, ಆಟಿಕೆ ರೈಲು, ಕೈಯಿಂದ ಚಾಲಿತ ಕ್ರೇನ್, ರೈಲ್ ಬಸ್ ಮತ್ತು ಸ್ಟೀಮ್ ಫೈರ್ ಪಂಪ್ನಂತಹ ದೊಡ್ಡ ಹೊರಾಂಗಣ ಪ್ರದರ್ಶನಗಳ ಅದ್ಭುತ ಪ್ರಕಾಶಿತ ನೋಟವನ್ನು ಪ್ರವಾಸಿಗರು ವೀಕ್ಷಿಸಬಹುದಾಗಿದೆ. ಕೆಲಸದ ಸಮಯವನ್ನು ಎರಡು ಗಂಟೆಗಳಷ್ಟು ವಿಸ್ತರಿಸಲಾಗುವುದು. ರಜಾ ದಿನಗಳಾದ ಸೆ.27 ಮತ್ತು ಅ.4ರಂದು ಸಾರ್ವಜನಿಕ ವಿಕ್ಷಣೆಗೆ ತೆರೆದಿರುತ್ತದೆ’ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ್ ಕನಮಡಿ ತಿಳಿಸಿದ್ದಾರೆ.ಮಾಹಿತಿ ನೀಡಿದ್ದಾರೆ.

‘ನಿಗದಿತ ಶುಲ್ಕದ ಪಾವತಿಯೊಂದಿಗೆ ಎಸ್ಎಲ್ಆರ್, ಡಿಎಸ್ಎಲ್ಆರ್ ಕ್ಯಾಮೆರಾಗಳನ್ನು ಛಾಯಾಗ್ರಹಣಕ್ಕೆ ಬಳಸುವ ಅವಕಾಶವಿರುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.