ADVERTISEMENT

ಮೈಸೂರು | ಸಂಕ್ರಾಂತಿ ಸಂಭ್ರಮ: ಪ್ರಶಸ್ತಿ ಪ್ರದಾನ

11ನೇ ವರ್ಷದ ಕಾರ್ಯಕ್ರಮ; ಗಾಯನ ವೈಭವ, ನಾಲ್ವರಿಗೆ ‘ಭೂಮಿಗಿರಿ ನಾರಾಯಣಪ್ಪ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 5:10 IST
Last Updated 16 ಜನವರಿ 2026, 5:10 IST
ಮೈಸೂರಿನಲ್ಲಿ ಗುರುವಾರ ಭೂಮಿಗಿರಿ ನಾರಾಯಣಪ್ಪ ಪ್ರತಿಷ್ಠಾನ ಹಾಗೂ ಗಾನ ನಂದನದಿಂದ ರವಿ ಪಾಂಡವಪುರ, ಕೆ.ರಘುರಾಂ ವಾಜಪೇಯಿ, ಬಿ.ಎಂ.ರಾಮಚಂದ್ರು ಹಾಗೂ ಧರ್ಮಾಪುರ ನಾರಾಯಣ್‌ ಅವರಿಗೆ ‘ಭೂಮಿಗಿರಿ ನಾರಾಯಣಪ್ಪ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಮೈಸೂರಿನಲ್ಲಿ ಗುರುವಾರ ಭೂಮಿಗಿರಿ ನಾರಾಯಣಪ್ಪ ಪ್ರತಿಷ್ಠಾನ ಹಾಗೂ ಗಾನ ನಂದನದಿಂದ ರವಿ ಪಾಂಡವಪುರ, ಕೆ.ರಘುರಾಂ ವಾಜಪೇಯಿ, ಬಿ.ಎಂ.ರಾಮಚಂದ್ರು ಹಾಗೂ ಧರ್ಮಾಪುರ ನಾರಾಯಣ್‌ ಅವರಿಗೆ ‘ಭೂಮಿಗಿರಿ ನಾರಾಯಣಪ್ಪ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಮೈಸೂರು: ಭೂಮಿಗಿರಿ ನಾರಾಯಣಪ್ಪ ಪ್ರತಿಷ್ಠಾನ ಹಾಗೂ ಗಾನ ನಂದನ ವತಿಯಿಂದ ಸಂಸ್ಕೃತಿ ಚಿಂತಕ ಕೆ.ರಘುರಾಂ ವಾಜಪೇಯಿ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ರಾಜರಾಜೇಶ್ವರಿ ವಸ್ತ್ರಾಲಂಕಾರದ ಸಂಸ್ಥಾಪಕ ಬಿ.ಎಂ.ರಾಮಚಂದ್ರು, ಪತ್ರಕರ್ತ ರವಿ ಪಾಂಡವಪುರ ಅವರಿಗೆ 11ನೇ ವರ್ಷದ ರಾಜ್ಯಮಟ್ಟದ ಭೂಮಿಗಿರಿ ನಾರಾಯಣಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ವೇಳೆ ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು ಹಾಗೂ ಯುವ ಪರ್ವತಾರೋಹಿ ಸೂರ್ಯಕೃಷ್ಣ ಅವರನ್ನೂ ಅಭಿನಂದಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ವಿ.ಭೈರಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಕ್ಯಾಲೆಂಡರ್ ಬಿಡುಗಡೆ ಮಾಡಿದರು

ADVERTISEMENT

ಪ್ರತಿಷ್ಠಾನ ಹಾಗೂ ಗಾನ ನಂದನ ಅಧ್ಯಕ್ಷ ಎನ್.ಬೆಟ್ಟೇಗೌಡ ಸಾರಧ್ಯದಲ್ಲಿ ಲೇಖಕ ಡಾ.ವೈ.ಡಿ.ರಾಜಣ್ಣ, ಪೂರ್ಣಿಮಾ, ಶ್ರೀಲತಾ ಮನೋಹರ್, ಸಿ.ಎಸ್.ವಾಣಿ, ಶ್ವೇತಾ, ನಾಗೇಂದ್ರ, ಚಿನ್ನನಾಗಪ್ಪ ಹಾಗೂ ಶ್ರೇಯಾ ಪಿ. ಸಾರಥಿ ಗಾಯನ ಪ್ರಸ್ತುತಪಡಿಸಿದರು. ಸಂಘಟಕರು ಎಲ್ಲರಿಗೂ ಎಳ್ಳು– ಬೆಲ್ಲ ವಿತರಿಸಿ ಹಬ್ಬದ ಶುಭ ಕೋರಿದರು.

ಅಲೆಯನ್ಸ್‌ ಜಿಲ್ಲಾ ಗವರ್ನರ್‌ ಎಸ್‌.ವೆಂಕಟೇಶ್‌, ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪಡುವಾರಹಳ್ಳಿಯ ಭೈರಪ್ಪ, ಪಡುವಾರಹಳ್ಳಿ ಗ್ರಾಮಾಭ್ಯುದಯ ಸಂಘದ ಅಧ್ಯಕ್ಷ ಮೆಲ್ಲಹಳ್ಳಿ ಮಹದೇವಸ್ವಾಮಿ, ರೇವತಿ ಕೃಷ್ಣಪ್ಪ ಹಾಜರಿದ್ದರು.

ಎಲ್ಲರಿಗೂ ಎಳ್ಳು– ಬೆಲ್ಲ ವಿತರಣೆ; ಸಂಭ್ರಮ ಜನರ ಗಮನ ಸೆಳೆದ ಗಾಯನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.