ADVERTISEMENT

ಸಮಾಜ ಕಲ್ಯಾಣ ಇಲಾಖೆಗೆ ಸೇರಿದ್ದ ಜಾಗ ಒತ್ತುವರಿ: ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:12 IST
Last Updated 7 ಫೆಬ್ರುವರಿ 2026, 4:12 IST
<div class="paragraphs"><p>ಮೈಸೂರಿನ&nbsp;ಬೆಂಗಳೂರು–ನೀಲಗಿರಿ ರಸ್ತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ್ದ ಜಾಗದಲ್ಲಿ ನಡೆದಿದ್ದ ಒತ್ತುವರಿಯನ್ನು ಜಿಲ್ಲಾಡಳಿತವು ಶುಕ್ರವಾರ ತೆರವುಗೊಳಿಸಿತು&nbsp; ಪ್ರಜಾವಾಣಿ ಚಿತ್ರ&nbsp;&nbsp;</p></div>

ಮೈಸೂರಿನ ಬೆಂಗಳೂರು–ನೀಲಗಿರಿ ರಸ್ತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ್ದ ಜಾಗದಲ್ಲಿ ನಡೆದಿದ್ದ ಒತ್ತುವರಿಯನ್ನು ಜಿಲ್ಲಾಡಳಿತವು ಶುಕ್ರವಾರ ತೆರವುಗೊಳಿಸಿತು  ಪ್ರಜಾವಾಣಿ ಚಿತ್ರ  

   

ಮೈಸೂರು: ‌‌ಸಮಾಜ ಕಲ್ಯಾಣ ಇಲಾಖೆಗೆ ಸೇರಿದ್ದ 38 ಗುಂಟೆ ಒತ್ತುವರಿಯನ್ನು ಶುಕ್ರವಾರ ಮುಂಜಾನೆ ಜಿಲ್ಲಾಡಳಿತವು ತೆರವು ಮಾಡಿದೆ. 

ಬೆಂಗಳೂರು– ನೀಲಗಿರಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಎದುರು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿ ಅಕ್ರಮವಾಗಿ ಪಾರ್ಕಿಂಗ್‌ ಮತ್ತು ಟೀ ಮಾರಾಟ ಅಂಗಡಿಗಳನ್ನು ಇರಿಸಿದ್ದರು. 2011ರಲ್ಲಿಯೇ ಈ ಜಾಗವನ್ನು ಹಿಂದುಳಿದ ವರ್ಗಗಳ ಡಿ.ದೇವರಾಜ ಅರಸು ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಸರ್ಕಾರವು ಮಂಜೂರು ಮಾಡಿತ್ತು. 

ADVERTISEMENT

25 ವರ್ಷಗಳಿಂದ ಇದೇ ಜಾಗದಲ್ಲಿ ಒತ್ತುವರಿದಾರರಿದ್ದರೂ ಕ್ರಮ ಕೈಗೊಳ್ಳದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಎಚ್ಚೆತ್ತ ಜಿಲ್ಲಾಡಳಿತವು ಕಾರ್ಯಾಚರಣೆ ನಡೆಸಿತು. ತಹಶೀಲ್ದಾರ್ ಮಹೇಶ್‌ ಕುಮಾರ್ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಘವೇಂದ್ರ, ಇನ್‌ಸ್ಪೆಕ್ಟರ್‌ಗಳಾದ ಯೋಗಾಂಜನಪ್ಪ, ರವಿಕುಮಾರ್ ಭಾಗವಹಿಸಿದ್ದರು.

ಜೆಸಿಬಿ ಸಹಾಯದಿಂದ ಅಂಗಡಿಗಳನ್ನು ಕೆಡವಿದ ನಂತರ ಜಾಗವನ್ನು ಇಲಾಖೆಗೆ ಹಸ್ತಾಂತರಿಸಲಾಗಿದೆ. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.