
ಪ್ರಜಾವಾಣಿ ವಾರ್ತೆ
ಮೈಸೂರು: ‘ಕುವೆಂಪು ನಿವಾಸ ‘ಉದಯರವಿ’ ಅನ್ನು ಸ್ಮಾರಕ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಮೂರು ದಿನಗಳೊಳಗೆ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದರು.
ನಗರದ ವಿ.ವಿ.ಮೊಹಲ್ಲಾದಲ್ಲಿರುವ ಮನೆಗೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಜೆಟ್ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಭೆ ಕರೆಯಲಿದ್ದು, ಕುವೆಂಪು ಅವರ ಅಳಿಯ ಪ್ರೊ.ಚಿದಾನಂದಗೌಡ ಅವರನ್ನೂ ಕರೆಸಿ ಮಾತನಾಡಲಿದ್ದೇವೆ’ ಎಂದರು.
‘ಕಳೆದ ಬಜೆಟ್‌ನಲ್ಲಿ ಸ್ಮಾರಕಕ್ಕೆಂದು ₹ 5 ಕೋಟಿ ಮೀಸಲಿಟ್ಟಿದ್ದರೂ ಅನುಷ್ಠಾನಗೊಳ್ಳಲಿಲ್ಲ. ಕುವೆಂಪು ನಡೆದಾಡಿದ ಸ್ಥಳಕ್ಕೆ ಬೆಲೆ ಕಟ್ಟಲಾಗದು. 90 ವರ್ಷದ ಈ ಮನೆಯನ್ನು ಸ್ಮಾರಕವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆವು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.