ADVERTISEMENT

ನಾಡ ಕಚೇರಿಗೆ ಸ್ವಂತ ಕಟ್ಟಡವಿಲ್ಲ

ಬಿಳಿಕೆರೆ ನಾಡ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 18:53 IST
Last Updated 20 ಜನವರಿ 2019, 18:53 IST
ಬಿಳಿಕೆರೆಯಲ್ಲಿರುವ ನಾಡ ಕಚೇರಿ ದುಸ್ಥಿತಿಯಲ್ಲಿದೆ
ಬಿಳಿಕೆರೆಯಲ್ಲಿರುವ ನಾಡ ಕಚೇರಿ ದುಸ್ಥಿತಿಯಲ್ಲಿದೆ   

ಬಿಳಿಕೆರೆ: ಹುಣಸೂರು ಉಪವಿಭಾಗ ವ್ಯಾಪ್ತಿಯ ನಾಲ್ಕು ಹೋಬಳಿಗಳಲ್ಲಿ ನಾಡ ಕಚೇರಿಗಳಿದ್ದು, ಒಂದಕ್ಕೂ ಸ್ವಂತ ಕಟ್ಟಡವಿಲ್ಲ. ಮೂಲಸೌಕರ್ಯದ ಕೊರತೆ ನಡುವೆ ಈ ಕಚೇರಿಗಳ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಿಳಿಕೆರೆ ಗ್ರಾಮದಲ್ಲಿರುವ ನಾಡ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಸಿಬ್ಬಂದಿ ಹಾಗೂ ಇಲ್ಲಿಗೆ ಬರುವ ಸಾರ್ವಜನಿಕರು ಆತಂಕ ಪಡುವಂತಾಗಿದೆ.

ಈ ಕಟ್ಟಡವು ಸುಮಾರು 80 ವರ್ಷಗಳ ಹಳೆಯದು. ಈ ಹಿಂದೆ ಇದು ಶಾಲೆಯಾಗಿತ್ತು. ಗೋಡೆಯ ಮೇಲ್ಪದರ ಅಲ್ಲಲ್ಲಿ ಬಿದ್ದು ಹೋಗಿದ್ದು, ಇಟ್ಟಿಗೆಗಳು ಕಾಣುತ್ತಿವೆ. ಮಳೆಗಾಲದಲ್ಲಿ ನೀರು ಸೋರುತ್ತದೆ. ಆದರೆ, ಸುಣ್ಣ–ಬಣ್ಣ ಬಳಿದಿರುವುದರಿಂದ ಮೇಲ್ನೋಟಕ್ಕೆ ಚೆನ್ನಾಗಿ ಕಾಣುತ್ತಿದೆ.

ADVERTISEMENT

ಜಿಲ್ಲಾಧಿಕಾರಿ ಕಚೇರಿ ವತಿಯಿಂದ ಕಂಪ್ಯೂಟರ್ ಆಪರೇಟರ್‌ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಲಾಗಿದೆ. ಆದರೆ, ಸಿಬ್ಬಂದಿಗೆ ಬೇಕಾದ ಮೂಲಸೌಲಭ್ಯಗಳು ಇಲ್ಲ. ದಾಖಲೆಗಳನ್ನು ಇಡಲು ಸ್ಟ್ಯಾಂಡ್ ಇಲ್ಲ. ಇದರಿಂದ ನೌಕರರಿಗೆ ಸಮಸ್ಯೆ ಆಗುತ್ತಿದೆ.

ತಹಶೀಲ್ದಾರ್ ಮೋಹನ್ ಮಾತನಾಡಿ, ‘ನಾಡ ಕಚೇರಿಗಳಿಗೆ ಸ್ವಂತ ಕಟ್ಟಡ ಒದಗಿಸಲು ಜಾಗಗಳನ್ನು ಗುರುತಿಸಲಾಗಿದೆ. ಅನುದಾನ ಸಿಕ್ಕ ಕೂಡಲೇ ಕಟ್ಟಡಗಳ ಕಾಮಗಾರಿ ಕೈಗೊಳ್ಳಲಾಗುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.