ADVERTISEMENT

ನಾಗರಹೊಳೆ: ಹುಲಿ ಗಣತಿ ಆರಂಭ

300 ಸಿಬ್ಬಂದಿ 91 ಗಸ್ತುಗಳಲ್ಲಿ ಕಾರ್ಯನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 20:02 IST
Last Updated 5 ಜನವರಿ 2026, 20:02 IST
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಗಣತಿ ಕಾರ್ಯ ಆರಂಭಿಸಿದ ಸಿಬ್ಬಂದಿ ವಿವಿಧ ಪ್ರಾಣಿಗಳ ಮಲ ಸಂಗ್ರಹಿಸಿದರು
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಗಣತಿ ಕಾರ್ಯ ಆರಂಭಿಸಿದ ಸಿಬ್ಬಂದಿ ವಿವಿಧ ಪ್ರಾಣಿಗಳ ಮಲ ಸಂಗ್ರಹಿಸಿದರು   

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ 6ನೇ ಅಖಿಲ ಭಾರತ ಹುಲಿ ಗಣತಿ ಆರಂಭವಾಗಿದೆ. ಜ.5ರಿಂದ 12ರವರಗೆ 8 ದಿನ ಗಣತಿ ನಡೆಯಲಿದ್ದು, ಇಲಾಖೆ ಸಿಬ್ಬಂದಿ ಸೇರಿದಂತೆ ಕೊಡಗಿನ ಅರಣ್ಯ ಕಾಲೇಜಿನ 30 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಕಚೇರಿ ಎಸಿಎಫ್‌ ಲಕ್ಷ್ಮಿಕಾಂತ್‌ ತಿಳಿಸಿದ್ದಾರೆ.

ನಾಗರಹೊಳೆ ಅಭಯಾರಣ್ಯದ 8 ವಲಯದ 91 ಗಸ್ತು ಪ್ರದೇಶದಲ್ಲಿ ರಾಷ್ಟ್ರೀಯ ಹುಲಿ ಗಣತಿ ಕಾರ್ಯದಲ್ಲಿ ಇಲಾಖೆ ಮೂರು ಹಂತದಲ್ಲಿ ಹುಲಿ ಗಣತಿ ಕಾರ್ಯ ನಡೆಸಲಿದೆ. ಜ.5ರಿಂದ ರಂದು ಮೊದಲ ದಿನದಲ್ಲಿ ಮಾಂಸಹಾರಿ ಮತ್ತು ದೊಡ್ಡ ಸಸ್ಯಹಾರಿ ಆನೆ ಮತ್ತು ಕಾಡೆಮ್ಮೆ(ಕಾಟಿ) ಓಡಾಟಗಳ ಕುರಿತಾದ ಗುರುತುಗಳು ಅವುಗಳ ಹಿಕ್ಕೆ, ಲದ್ದಿ, ಪಾದದ ಗುರುತು ಮರಕ್ಕೆ ಪರಿಚಿದ ಗುರುತು, ಇದಲ್ಲದೆ ಇತರೆ ವನ್ಯಪ್ರಾಣಿಗಳ ಮಲ ವೈಜಾನಿಕವಾಗಿ ಕಿಟ್‌ನಲ್ಲಿ ಸಂಗ್ರಹಿಸಿ ದಾಖಲಿಸಲಾಗುವುದು. ಪ್ರತಿ ದಿನ 5 ಕಿ.ಮೀ ಕಾಲ್ನಡಿಗೆಯಲ್ಲಿ ಇಲಾಖೆ ಗುರುತಿಸಿದ ದಾರಿಯಲ್ಲಿ ತೆರಳಿ ಗಣತಿ ಕಾರ್ಯ ನಡೆಯಲಿದೆ ಎಂದರು.

ಕ್ಯಾಮೆರಾ: ಅರಣ್ಯದಲ್ಲಿ ಈಗಾಗಲೇ ಹುಲಿ ಚಲನವಲನ ದಾಖಲಿಸಲು 496 ಕ್ಯಾಮೆರಾ ಅಳವಡಿಸಿದ್ದು, ಕ್ಯಾಮೆರಾದಲ್ಲಿ ದಾಖಲಾಗುವ ಪ್ರತಿಯೊಂದು ಹುಲಿಯನ್ನು ಪ್ರತ್ಯೇಕವಾಗಿ ದಾಖಲಿಸಿಲಾಗುವುದು. ಈ ಪ್ರಕ್ರಿಯೆ ಅರಣ್ಯದಲ್ಲಿ 25 ದಿನಗಳು ನಿರಂತರವಾಗಿ ನಡೆಯಲಿದೆ ಎಂದರು.

ADVERTISEMENT

ರಾಷ್ಟ್ರೀಯ ಹುಲಿ ಗಣತಿ ಕಾರ್ಯ ಪ್ರತಿ 5 ವರ್ಷಕ್ಕೆ ಒಮ್ಮೆ ರಾಷ್ಟ್ರದಾದ್ಯಂತ ಅಭಯಾರಣ್ಯದಲ್ಲಿ ನಡೆಯಲ್ಲಿದ್ದು, ಅದೇ ರೀತಿ ರಾಜ್ಯದ ನಾಗರಹೊಳೆ, ಬಂಡೀಪುರ, ಮಲೆಮಹದೇಶ್ವರ ಬೆಟ್ಡ, ಬಿ.ಆರ್.‌ ಹಿಲ್ಸ್‌ ಗಳಲ್ಲಿಯೂ ನಡೆದಿದೆ. ಅಖಿಲ ಭಾರತ ಹುಲಿ ಗಣತಿಯಂತೆ ರಾಜ್ಯದಲ್ಲಿ 2021-22 ರಲ್ಲಿ 140 ಹುಲಿ ಕಂಡು ಬಂದಿದ್ದು, ಪ್ರತಿ ಚದರ ಕಿ.ಮಿ.ನಲ್ಲಿ 11 ಹುಲಿಗಳಿಗೆ ಆಶ್ರಯ ಸಿಕ್ಕಿತ್ತು ಎಂದರು.

ಎಂ-ಸ್ಟ್ರಪ್ಸ್‌: ಹುಲಿ ಗಣತಿಯನ್ನು ಈ ಹಿಂದೆ ಡೇಟಾ ಶೀಟ್‌ನಲ್ಲಿ ಬಳಸಿ ದಾಖಲಿಸಲಾಗಿತ್ತು. ಈ ಸಾಲಿನಲ್ಲಿ ಎಂ-ಸ್ಟ್ರೆಪ್ಸ್‌ (M-STrIPES)ಎನ್ನುವ ಇಕಾಲಾಜಿಕಲ್‌ ಆ್ಯಪ್ ಬಳಸಲಾಗುತ್ತಿದ್ದು, ಗಣತಿ ಕಾರ್ಯದಲ್ಲಿ ಹೆಚ್ಚಿನ ಮಟ್ಟದ ನಿಖರತೆ ಸಿಗಲಿದೆ. ಗಣತಿ ಕಾರ್ಯದಲ್ಲಿ ಭಾಗವಹಿಸಿರುವ ಸಿಬ್ಬಂದಿಗೆ ಆ್ಯಪ್‌ ಬಳಸುವ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ದಾಖಲಾದ ಮಾಹಿತಿ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಹುಲಿ ಗಣತಿ ಕಾರ್ಯದಿಂದ ಸ್ಥಳೀಯವಾಗಿ ಹುಲಿ ಸಾಂದ್ರತೆ ತಕ್ಕಂತೆ ಆಹಾರ ಚಕ್ರ ಸಮನಾಗಿರುವ ಬಗ್ಗೆ ತಿಳಿಯಲಿದ್ದು ಮಾಂಸಹಾರಿ ಪ್ರಾಣಿಗಳ ಅಗತ್ಯಕ್ಕೆ ತಕ್ಕಷ್ಟು ಸಸ್ಯಹಾರಿ ಪ್ರಾಣಿಗಳ ಸಾಂದ್ರತೆ ಇದಯೋ ಇಲ್ಲವೋ ಎಂಬ ಮಾಹಿತಿಯನ್ನು ಕಲೆ ಹಾಕಲು ಸಹಕಾರಿಯಾಗಲಿದ

– ಲಕ್ಷ್ಮಿಕಾಂತ್‌ ಎಸಿಎಫ್‌ ನಾಗರಹೊಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.