ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು: ‘ನಂಜನಗೂಡು– ಮೈಸೂರು ರಸ್ತೆಯ ಆರ್‌ಎಂಸಿ ಹತ್ತಿರದ ವೃತ್ತ ಅಥವಾ ಎಚ್.ಡಿ.ಕೋಟೆ– ಮೈಸೂರು ರಸ್ತೆಯ ಶ್ರೀರಾಂಪುರ ರಿಂಗ್ ರಸ್ತೆ ವೃತ್ತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡಬೇಕು’ ಎಂದು ನಾಚನಹಳ್ಳಿಪಾಳ್ಯ, ಶ್ರೀರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೋವಿ ಸಮುದಾಯದ ಮುಖಂಡರು ಪಾಲಿಕೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಮನವಿ ಮಾಡಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್‌ನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಮಲ್ಲೇಶ್ ಕೋಟೆ ಮಾತನಾಡಿ, ‘ಸಿದ್ದರಾಮಯ್ಯ ಅವರು ಶಾಸಕರಾಗಿದ್ದಾಗ ನಾಚನಹಳ್ಳಿ ಪಾಳ್ಯದ ಭೋವಿ ಸಮುದಾಯಕ್ಕೆ ಬೆಂಬಲವಾಗಿ ನಿಂತು ಮನೆ, ನಿವೇಶನಗಳನ್ನು ನೀಡಿದ್ದಾರೆ. ಸಮುದಾಯಕ್ಕೆ ಸದಾ ನೆರವಾಗುತ್ತಿರುವ ಇವರ ಹೆಸರನ್ನು ವೃತ್ತಕ್ಕೆ ಇರಿಸಬೇಕು ಎಂಬುದು ಈ ಭಾಗದ ಸಮುದಾಯದವರ ಬೇಡಿಕೆ’ ಎಂದು ತಿಳಿಸಿದರು.
‘ಸಿದ್ದರಾಮಯ್ಯ ಅವರು ನಗರಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಚಾಮರಾಜನಗರಕ್ಕೂ ಭೇಟಿ ನೀಡುವ ಮೂಲಕ ಶಾಪಯುಕ್ತ ಜಿಲ್ಲೆ ಎಂಬ ಹೆಸರನ್ನು ತೊಡೆದು ಹಾಕಿದ್ದಾರೆ. ಹೀಗಾಗಿ ಕೆ.ಆರ್.ಎಸ್. ರಸ್ತೆಗೂ ಇವರ ಹೆಸರಿಟ್ಟರೆ ತಪ್ಪೇನಿಲ್ಲ. ಆ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂಬ ಹೆಸರಿರುವುದು ಯಾರಿಗೂ ತಿಳಿದಿಲ್ಲ. ಪರಿಚಿತವೂ ಅಲ್ಲ’ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ಉಪಾಧ್ಯಕ್ಷ ಕೇಶವಯ್ಯ, ಚನ್ನಯ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎ. ರಹೀಂ, ಭೋವಿ ಮುಖಂಡ ಆನಂದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.