ADVERTISEMENT

VIDEO: ಮೈಸೂರಿನ ಚಾಮುಂಡಿ ಬೆಟ್ಟದ ನಂದಿಗೆ ಭವ್ಯ ಮಹಾಭಿಷೇಕ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 10:55 IST
Last Updated 17 ನವೆಂಬರ್ 2025, 10:55 IST

ಮೈಸೂರಿನ ಚಾಮುಂಡಿ ಬೆಟ್ಟದ 500 ವರ್ಷಗಳ ಐತಿಹಾಸಿಕ ಏಕಶಿಲಾ ನಂದಿ ವಿಗ್ರಹಕ್ಕೆ ಭವ್ಯ ಮಹಾಭಿಷೇಕ ನೆರವೇರಿತು. ಬೆಟ್ಟದ ಗ್ರಾಮಸ್ಥರು ಮತ್ತು ನೂರಾರು ಭಕ್ತರ ಸಮ್ಮುಖದಲ್ಲಿ ನಂದಿಯ ಮಸ್ತಕಕ್ಕೆ ಧಾರೆ ಎರೆಯಲಾಯಿತು. ಸುತ್ತೂರು ಮಠ, ಆದಿಚುಂಚನಗಿರಿ ಮಠ ಮತ್ತು ಹೊಸಮಠದ ಸ್ವಾಮೀಜಿಗಳು ಪೂಜಾ ವಿಧಿಗಳನ್ನು ನೆರವೇರಿಸಿದರು.ಕನಕ ಅಭಿಷೇಕ ಸಂದರ್ಭದಲ್ಲಿ ನಂದಿ ಮೇಲಿಂದ ನಾಣ್ಯಗಳು ಉದುರಿದವು. ಪಂಚಾಮೃತ, ಶಾಲ್ಯಾನ್ನ, ಸುಗಂಧ ದ್ರವ್ಯ ಅಭಿಷೇಕ ಮತ್ತು ಪಂಚ ಕಲಶ ವಿಸರ್ಜನೆಯೊಂದಿಗೆ ಅಭಿಷೇಕ ಪೂರ್ಣಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.