
ನಂಜನಗೂಡು: ‘ತಾಲ್ಲೂಕಿನ ಯುವಕರನ್ನು ಉದ್ಯಮಿಗಳನ್ನಾಗಿ ರೂಪಿಸುವ ಜವಾಬ್ದಾರಿ ಬಿಲ್ಡರ್ಸ್ ಅಸೋಸಿಯೇಷನ್ ಸಂಸ್ಥೆಯ ಹೆಗಲಿಗಿದೆ’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ನಗರದಲ್ಲಿ ಶುಕ್ರವಾರ ಬಿಲ್ಡರ್ಸ್ ಅಸೋಸಿಯೇಷನ್‌ನ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
‘ತಾಲ್ಲೂಕಿನಲ್ಲಿ ಕೈಗಾರಿಕೆಗಳು, ವಿದ್ಯಾಸಂಸ್ಥೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಯುವಕರು ಉದ್ಯಮಿಗಳಾಗಿ ಯಶಸ್ವಿಯಾಗಲು ಉತ್ತಮ ವಾತಾವರಣ, ಅವಕಾಶಗಳಿವೆ. ಸಂಸ್ಥೆ ಯುವಕರ ಅಭ್ಯುದಯ ಕಾಪಾಡುವ ಸೇತುವೆಯಾಗಿ ಉದ್ಯಮಿಗಳನ್ನು ಹುಟ್ಟುಹಾಕುವ ಮೂಲಕ ದೇಶದ ಅಭಿವೃದ್ದಿಗೆ ಸಹಕಾರ ನೀಡಬೇಕು’ ಎಂದು ಹೇಳಿದರು.
ಅಸೋಸಿಯೇಷನ್ ಅಧ್ಯಕ್ಷ ಕೃಷ್ಣಪ್ಪ ಗೌಡ ಮಾತನಾಡಿ, ‘ಎಂಟು ದಶಕಗಳ ನಂಜನಗೂಡಿನ ಉದ್ಯಮಿಗಳ ಕನಸು ನನಸಾಗಿದೆ. ಸಂಸ್ಥೆಗೆ 25 ಯುವ ಉದ್ಯಮಿಗಳನ್ನು ಆಯ್ಕೆ ಮಾಡಿ ಜಾವಾಬ್ದಾರಿ ವಹಿಸಲಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಉಪಾಧ್ಯಕ್ಷ ಮಹದೇವ ಶೆಟ್ಟಿ, ರಮೇಶ್, ದಿಲೀಪ್ ಕುಮಾರ್, ಎನ್.ಸುಬ್ರಮಣ್ಯ, ಜಿ.ಮಂಜುನಾಥ್, ತಿರುಮಲೇಶ್ ಗೌಡ, ಉಮೇಶ್, ಸೋಮಶೇಖರ್, ಗೌತಮ್ ಕುಮಾರ್, ಸತೀಶ್ ಗಾಣಿಗ, ಬಸವರಾಜು, ಶಶಾಂಕ್, ಶಹಾದ್, ರವೀಶ್, ಬಿ.ಪಿ. ಸುರೇಶ್,ನಟರಾಜ್, ಶಿವಶಂಕರ್, ವರುಣ್, ವಿಫುಲ್, ಎಸ್. ಮಂಜುನಾಥ್, ರವಿ,ಕೌಶಿಕ್, ಉಮೇಶ್, ಕೃಷ್ಣ ಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.