ADVERTISEMENT

ನಂಜನಗೂಡು: ಚಾಕುವಿನಿಂದ ಹಲ್ಲೆ ನಡೆಸಿ ಚಿನ್ನದ ಸರ ದೋಚಲು ಯತ್ನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:11 IST
Last Updated 27 ಅಕ್ಟೋಬರ್ 2025, 4:11 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ನಂಜನಗೂಡು: ನಗರದ ಹಂಡುವಿನಹಳ್ಳಿ ಬಡಾವಣೆಯಲ್ಲಿ ಶನಿವಾರ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ದಂಪತಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು  ಇರಿದು, ಚಿನ್ನದ ಸರ ಕಸಿಯಲು  ವಿಫಲ ಯತ್ನ ನಡೆಸಿದ್ದಾರೆ.

ಹದಿನಾರು ಗ್ರಾಮದ ರಾಜೇಂದ್ರ ಹಾಗೂ  ಪತ್ನಿ ಸಂಗೀತಾ ಶನಿವಾರ ಸಂಜೆ ನಗರದ ಹಂಡುವಿನಹಳ್ಳಿ ಬಡಾವಣೆಯ ಮುಖ್ಯರಸ್ತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು  ಸವಾರ ರಾಜೇಂದ್ರರನ್ನು ತಳ್ಳಿ ಬೀಳಿಸಿ ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಚುಚ್ಚಿದ್ದರು. ಸಂಗೀತಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಳ್ಳವ ಪ್ರಯತ್ನದಲ್ಲಿದ್ದಾಗ ಎದುರಿನಿಂದ ವಾಹನವೊಂದು ಬಂದಿದ್ದು, ಪರಾರಿಯಾಗಿದ್ದಾರೆ.

 ಗಾಯಾಳು ರಾಜೇಂದ್ರ ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.