ನಂಜನಗೂಡು: ತಾಲ್ಲೂಕಿನ ಹುಲ್ಲಹಳ್ಳಿ, ಬೆಳಲೆ, ಮೊಬ್ಬಹಳ್ಳಿ, ಗೀಕಹಳ್ಳಿ, ಕೋಡಿನರಸೀಪುರ, ದೇವನೂರು, ನಂಜನಹಳ್ಳಿ, ಗ್ರಾಮಗಳಲ್ಲಿ ₹3.53 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
ತಾಲ್ಲೂಕಿನ ದೇವನೂರು ಗ್ರಾಮದಲ್ಲಿ ಮಂಗಳವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮೊಬ್ಬಹಳ್ಳಿ ಗ್ರಾಮದಲ್ಲಿ ₹15 ಲಕ್ಷ, ಬೆಳಲೆ ಗ್ರಾಮದಲ್ಲಿ ₹20 ಲಕ್ಷ ವೆಚ್ಚದಲ್ಲಿ ಸಾಮಾನ್ಯ ವರ್ಗದ ಬೀದಿಯ ರಸ್ತೆ ಅಭಿವೃದ್ಧಿ, ಗೀಕಹಳ್ಳಿ ಗ್ರಾಮದಲ್ಲಿ ₹13 ಲಕ್ಷ ವೆಚ್ಚದಲ್ಲಿ ಬಸ್ ತಂಗುದಾಣ , ದೇವನೂರು ಗ್ರಾಮದಲ್ಲಿ ₹20 ಲಕ್ಷ ವೆಚ್ಚದಲ್ಲಿ ಸಾಮಾನ್ಯ ವರ್ಗದ ಬೀದಿಯ ಅಭಿವೃದ್ಧಿ, ಟಿಎಸ್‌ಪಿ ಯೋಜನೆಯಡಿ ₹20 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಎಸ್ಇಪಿ ಯೋಜನೆಯಡಿ ಪರಿಶಿಷ್ಟ ಜಾತಿಯವರ ಬೀದಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಒಟ್ಟು ₹ 3.53 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕ್ಷೇತ್ರಕ್ಕೆ ಕಳೆದ ಎರಡು ವರ್ಷಗಳಲ್ಲಿ₹ 4.80 ಕೋಟಿ ಅನುದಾನ ಬಿಡುಗಡೆಗೊಂಡಿದೆ ಎಂದು ಹೇಳಿದರು.
ಕಳಲೆ ಕೇಶವಮೂರ್ತಿ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಶ್ರೀಕಂಠ ನಾಯಕ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ. ಮಾರುತಿ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕರಳಾಪುರ ನಾಗರಾಜು, ಚಾಮರಾಜು, ದೊರೆಸ್ವಾಮಿ ನಾಯಕ, ನಂಜನಹಳ್ಳಿ ಎನ್.ಎಸ್.ಮಾದಪ್ಪ, ಕಳಲೆ ರಾಜೇಶ್, ಅಭಿನಂದನ್ ಪಟೇಲ್, ಕುರಿಹುಂಡಿ ರಾಜು, ಶಿವಪ್ಪದೇವರು, ಹಲ್ಲರೆ ಮಹದೇವು, ಸ್ವಾಮಿನಾಯಕ, ಅಣ್ಣಬಸವಣ್ಣ, ಸಾಮಾಜಿಕ ಜಾಲತಾಣ ಅಧ್ಯಕ್ಷ ಬೆಳಲೆ ಎಸ್. ಮಹೇಶ್ ಉಪಸ್ಥಿತರಿದ್ದರು.
‘ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ’
ನಂಜನಗೂಡು ಜನರು ನೀಡಿರುವ ಜವಾಬ್ದಾರಿಯಂತೆ ಕ್ಷೇತ್ರದ ಅಭಿವೃದ್ಧಿಗೆ ಸದಾ ಶ್ರಮಿಸುತ್ತೇನೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಪಿಯುಸಿ ಕಾಲೇಜು ಕಟ್ಟಡ ನಿರ್ಮಾಣದ ಭೂಮಿ ಪೂಜೆ ನಡೆಸಿ ಮಾತನಾಡಿದರು. ಹುಲ್ಲಹಳ್ಳಿ ಗ್ರಾಮಕ್ಕೆ ಎರಡು ವರ್ಷಗಳಲ್ಲಿ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ನಡೆಸಲಾಗಿದೆ ಪಿಯುಸಿ ಕಾಲೇಜನ್ನು ₹1. 38 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದುವರೆಗೆ ಹುಲ್ಲಹಳ್ಳಿ ಗ್ರಾಮದಕ್ಕೆ 1.68 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಹುಚ್ಚಯ್ಯ ಉಪಾಧ್ಯಕ್ಷ ಎಚ್ ಪಿ ಲೋಕೇಶ್ ಸದಸ್ಯ ಪ್ರತಾಪ್ (ಮಂಜು) ಸೋಮಶೇಖರ್ ಮಾಜಿ ಸದಸ್ಯ ನದೀಮ್ ಅಹಮದ್ ಹು.ಲಿ. ಚಾಮುಂಡ ನಾಯಕ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಾರುತಿ ಕಾಲೇಜು ಅಭಿವೃದ್ಧಿ ಉಪಾಧ್ಯಕ್ಷ ಅಣ್ಣ ಬಸವಣ್ಣ ಪ್ರಮುಖರಾದ ಶಿವನಂಜ ನಾಯಕ ಶ್ರೀಕಂಠ ನಾಯಕ ಚಡ್ಡಿ ಮಲ್ಲೇಶ್ ಹರದನಹಳ್ಳಿ ಸೋಮೇಶ ಕಾಶಿ ಮೆಕಾನಿಕ್ ಚಂದ್ರು ಪ್ರಸಾದ್ ಮಡಿಕೆ ಹುಂಡಿ ಶಿವಣ್ಣ ಪ್ರಾಂಶುಪಾಲ ಸೋಮಶೇಖರ್ ಜಯ ಶೆಟ್ಟಿ ಡಿಎಸ್ಎಸ್ ಮಹೇಶ್ ಪ್ರಸನ್ನ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.