ADVERTISEMENT

ವ್ಯಸನದಿಂದ ಬದುಕಿನ ಅವಸಾನ:'ನಶಾ ಮುಕ್ತ ಭಾರತ ಅಭಿಯಾನದಲ್ಲಿ ಪ್ರಾಂಶುಪಾಲ ಸೋಮಣ್ಣ

'ನಶಾ ಮುಕ್ತ ಭಾರತ ಅಭಿಯಾನದಲ್ಲಿ ಪ್ರಾಂಶುಪಾಲ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 5:13 IST
Last Updated 25 ಅಕ್ಟೋಬರ್ 2025, 5:13 IST
ಧರ್ಮಾಪುರ ಸಮೀಪದ ಸಾದನಾಪುರದ ವಿಎಸ್ಎಸ್ ವಿದ್ಯಾಸಂಸ್ಥೆಯಲ್ಲಿ  ಮಾದಕ ವಸ್ತುಗಳ ವಿರುದ್ಧ ಅಭಿಯಾನದಲ್ಲಿ ಪ್ರಾಂಶುಪಾಲರಾದ ಸೋಮಣ್ಣ,   ಶಿವಕುಮಾರ್, ಉಪನ್ಯಾಸಕರಾದ ಅರುಳಪ್ಪ, ಶಿವಕುಮಾರ್, ಪೂರ್ಣಿಮಾ, ಸಂಗೀತ, ರವಿ ಎಂ, ಪರಮೇಶ, ಮನೋಜ್ ಕುಮಾರ್, ಪ್ರದೀಪ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಶ್ರೀನಿವಾಸ್, ಹೇಮಂತ್ ಕುಮಾರ್, ಮಂಜುನಾಥ್ ಎಸ್. ಭಾಗವಹಿಸಿದ್ದರು.

ಧರ್ಮಾಪುರ: ಮದ್ಯ ಮತ್ತು ಮಾದಕ ವಸ್ತುಗಳ ಸೇವನೆ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯನ್ನು ಹಾಳು ಮಾಡುತ್ತವೆ. ವಿದ್ಯಾರ್ಥಿಗಳು ಇದರಿಂದ ದೂರವಿರಬೇಕು ಎಂದು  ಸಾಧನಪುರದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಣ್ಣ ಹೇಳಿದರು.

ಸಾಧನಪುರದ ವಿಎಸ್ಎಸ್ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 'ನಶಾ ಮುಕ್ತ ಭಾರತ ಅಭಿಯಾನ,  ಮಾದಕ ವ್ಯಸನಗಳ ದುಷ್ಪರಿಣಾಮಗಳು' ಕುರಿತು  ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ  ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.

ಪದವಿ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ್ ಮಾತನಾಡಿ,  ಮಾದಕ ವಸ್ತುಗಳ ವ್ಯಸನ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೆ.  ದುಷ್ಪರಿಣಾಮಗಳ ಕುರಿತು ಜಾಗೃತಿ ಪ್ರತಿ ಮನೆಯಿಂದ ಜಾರಿಗೊಳಿಸಬೇಕು ಎಂದು ತಿಳಿಸಿದರು. 

ADVERTISEMENT

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ , ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಉದ್ದೂರ್ ಕಾವಲ್ ಗ್ರಾಮ ಪಂಚಾಯಿತಿ, ಆಸ್ಪತ್ರೆ ಕಾವಲ್ ಗ್ರಾಮ ಪಂಚಾಯಿತಿ  ಸಹಯೋಗದಲ್ಲಿ  ಆಯೋಜಿಸಲಾಗಿತ್ತು. ಪ್ರತಿಜ್ಞಾವಿಧಿ ಬೋಧಿಸಲಾಯಿತು.

 ದೈಹಿಕ ಶಿಕ್ಷಣ ಉಪನ್ಯಾಸಕರಾದ ಶಿವಕುಮಾರ್, ಪೂರ್ಣಿಮಾ, ಸಂಗೀತಾ, ಅರುಳಪ್ಪ, ರವಿ ಎಂ., ಪರಮೇಶ, ಮನೋಜ್ ಕುಮಾರ್, ಪ್ರದೀಪ್, ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಶ್ರೀನಿವಾಸ್, ಹೇಮಂತ್ ಕುಮಾರ್, ಮಂಜುನಾಥ್ ಎಸ್. ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.