ಮೈಸೂರು: ಜಿಲ್ಲೆಯ ಜಿಮ್ನಾಸ್ಟಿಕ್ಸ್ ಕ್ರೀಡಾಪಟುಗಳು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಪದಕ ಜಯಿಸಿದ್ದಾರೆ.
ರಾಷ್ಟ್ರಮಟ್ಟದ ಬಾಲಕ, ಬಾಲಕಿಯರ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಈ ವಿಭಾಗದಲ್ಲಿ (ಅಕ್ರೋಬೆಟಿಕ್ಸ್, ಟ್ರಾಂಪೋಲಿನ್ ಮತ್ತು ಟ್ರಂಬ್ಲಿಂಗ್) ಸ್ಪರ್ಧಿಗಳು ಪಾಲ್ಗೊಂಡರು. 12 ವರ್ಷದ ಒಳಗಿನವರ ವಿಭಾಗದಲ್ಲಿ ಅನ್ವಿ ಹರಿತಸ ಚಿನ್ನ ಹಾಗೂ 14 ವರ್ಷದ ಒಳಗಿನವರ ವಿಭಾಗದಲ್ಲಿ ಅರ್ಪಿತ್ ಕಲಗುಡಿ ಮತ್ತು 17 ವರ್ಷದ ಒಳಗಿನವರ ಟ್ರಂಬ್ಲಿಂಗ್ ವಿಭಾಗದಲ್ಲಿ ಕವನ್ ಕಂಚು ಗೆದ್ದರು.
13ರಿಂದ 19 ವರ್ಷದೊಳಗಿನ ಸ್ಪೋಟ್ಸರ್ ಅಕ್ರೋಬೆಟಿಕ್ಸ್ ಗುಂಪು ವಿಭಾಗದಲ್ಲಿ ಆರ್.ರಾಜೇಶ್, ಶಾನ್ ಗೌಡ, ಬಿ.ಎಂ.ಕವನ್ ಮತ್ತು ಆರ್.ತನ್ಮಯ್ ಅವರನ್ನು ಒಳಗೊಂಡ ತಂಡವು ಕಂಚು ಜಯಿಸಿತು. ಈ ಕ್ರೀಡಾಪಟುಗಳು ಸೆಪ್ಟೆಂಬರ್‌ನಲ್ಲಿ ಗೋವಾದಲ್ಲಿ ನಡೆಯಲಿರುವ ಅಕ್ರೋಬೆಟಿಕ್ಸ್ ಜಿಮ್ನಾಸ್ಟಿಕ್ಸ್ ಭಾರತ ತಂಡದ ತರಬೇತಿ ಶಿಬಿರದಲ್ಲಿ ಭಾಗಿ ಆಗಲಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಜಿಲ್ಲಾ ಕ್ರೀಡಾಶಾಲೆಯ ಜಿಮ್ನಾಸ್ಟಿಕ್ಸ್ ತರಬೇತುದಾರ ಬಿ.ಲೋಕೇಶ್, ಜಿಮ್ನಾಸ್ಟಿಕ್ಸ್ ತರಬೇತುದಾರ ಎಸ್. ವಿದ್ವತ್ ಕ್ರೀಡಾಪಟುಗಳನ್ನು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.