ADVERTISEMENT

ಮೈಸೂರು | ಯೋಗ: ಪಶ್ಚಿಮ ಬಂಗಾಳ ಚಾಂಪಿಯನ್, ಕರ್ನಾಟಕಕ್ಕೆ 3ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 7:14 IST
Last Updated 13 ಅಕ್ಟೋಬರ್ 2025, 7:14 IST
ಮೈಸೂರಿನಲ್ಲಿ ನಡೆದ ಯೋಗ ಚಾಂಪಿಯನ್‌ಶಿಪ್‌ನಲ್ಲಿ ವಿಜೇತ ತಂಡಗಳಿಗೆ ಗಣ್ಯರು ಬಹುಮಾನ ವಿತರಿಸಿದರು
ಮೈಸೂರಿನಲ್ಲಿ ನಡೆದ ಯೋಗ ಚಾಂಪಿಯನ್‌ಶಿಪ್‌ನಲ್ಲಿ ವಿಜೇತ ತಂಡಗಳಿಗೆ ಗಣ್ಯರು ಬಹುಮಾನ ವಿತರಿಸಿದರು   

ಮೈಸೂರು: ಪಶ್ಚಿಮ ಬಂಗಾಳ ತಂಡದವರು ಭಾನುವಾರ ಇಲ್ಲಿ ಮುಕ್ತಾಯಗೊಂಡ 50ನೇ ರಾಷ್ಟ್ರೀಯ ಯೋಗ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು. 

ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ‘ಭಾರತೀಯ ಯೋಗ ಒಕ್ಕೂಟ’ವು ರಾಜ್ಯ ಹವ್ಯಾಸಿ ಯೋಗ ಕ್ರೀಡಾ ಸಂಘ, ಏಷ್ಯನ್ ಯೋಗ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಪಶ್ಚಿಮ ಬಂಗಾಳ ಉತ್ತಮ ಪ್ರದರ್ಶನ ತೋರಿತು. 

ಕೇರಳ ತಂಡದವರು ರನ್ನರ್ ಅಪ್‌ ಪ್ರಶಸ್ತಿ ಪಡೆದರೆ, ಹರಿಯಾಣ ಹಾಗೂ ಆತಿಥೇಯ ಕರ್ನಾಟಕ ತಂಡವದರು 3ನೇ ಸ್ಥಾನ ಹಂಚಿಕೊಂಡರು. 

ADVERTISEMENT

ಫಲಿತಾಂಶ: 18ರಂದ 35 ವರ್ಷದೊಳಗಿನ ಮಹಿಳೆಯರ ಆರ್ಟಿಸ್ಟಿಕ್‌ ಪೇರ್‌ ವಿಭಾಗ: ರಾಜನ್ಯಾ ದಾಸ್‌, ಸ್ವರ್ಣಾಲಿ ಘೋಷ್‌ (ಪಶ್ಚಿಮ ಬಂಗಾಳ)–1, ಕೆ.ಎನ್‌.ಕಾವ್ಯಾ, ಎಂ.ಎಸ್‌.ಸಂಧ್ಯಾ (ಕರ್ನಾಟಕ)–2, ಅಶ್ವಿನಿ ಚೌರಿ, ತ್ರಿಷಾ ಮನ್ನ (ಗೋವಾ)–3. ಪುರುಷರ ವಿಭಾಗ: ಸುಮಿತ್‌, ಕೃನಾಲ್‌ (ಹರಿಯಾಣ)–1, ಸಮರೀಶ್‌ ಸರಿನ್, ಸೌವಿಕ್ ದಾಸ್‌ (ಪ.ಬಂ)–2, ಆಶಿಶ್‌ ರಂಜನ್, ಅಭಿಷೇಕ್ ರಾಮ್ (ಜಾರ್ಖಂಡ್‌)–3. 

18ರಂದ 35 ವರ್ಷದೊಳಗಿನ ಮಹಿಳೆಯರ ರಿದಮಿಕ್‌ ವಿಭಾಗ: ಕಿಮಿಯಾ ಚೌರ್ಬೆಲೆ, ರಚಿತಾ ವಲಾಪ (ಮಹಾರಾಷ್ಟ್ರ)–1, ಹಿಬಾ ಮರಿಯಮ್‌, ಫಾತಿಮ್‌ (ಕೇರಳ)–2, ರಾಥೋಡ್‌ ಇಶಾ, ಯುತಿ ತೇಜಸ್‌ (ಗುಜರಾತ್)–3. ‍ಪುರುಷರ ವಿಭಾಗ: ಅನಂತ ಮಂಡಲ್, ಸಮರೀಶ್‌ ಸರಿನ್ (ಪ.ಬಂ)–1, ನವನೀತ್‌, ಅರುಣ್‌ (ಕೇರಳ)–2, ಬಲವೀರ್, ಕೃನಾಲ್‌ (ಹರಿಯಾಣ)–3. 

ಪ್ರೊಫೆಷನಲ್‌ ಯೋಗ ವಿಭಾಗ: 21–30 ವರ್ಷದೊಳಗಿನ ಪುರುಷರು: ಬೀಸಪ್ಪ (ಕರ್ನಾಟಕ)–1, ಅಮಿತ್‌ ಕುಮಾರ್ (ಹರಿಯಾಣ)–2, ಆರ್ಯವೀರ್ ಸಿಂಗ್ (ಹರಿಯಾಣ)–3. 30 ವರ್ಷ ಮೇಲ್ಪಟ್ಟವರು: ಪಿಜುಷ್‌ ಕಾಂತಿ ಪನ್ (ಪ.ಬಂ)–1, ಬ್ರಜನಾಥ್ ಬಸಕ್–2, ಅನಿಲ್‌ ಕುಮಾರ್ (ಹರಿಯಾಣ)–3.  

800 ಯೋಗಪಟುಗಳ ಭಾಗಿ 

25 ರಾಜ್ಯಗಳ 800ಕ್ಕೂ ಹೆಚ್ಚು ಯೋಗಪಟುಗಳು ಸ್ಪರ್ಧಿಸಿದರು. ಜೋಡಿ ಯೋಗ ರಿದಮಿಕ್ ಯೋಗ ವೃತ್ತಿಪರ ಮತ್ತು ಫ್ರೀ ಫ್ಲೋ ಯೋಗ ಸ್ಪರ್ಧೆಗಳು ನಡೆದವು. ಪ್ರಶಸ್ತಿ ವಿತರಿಸಿದ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ‘ಯೋಗದ ಮೂಲಕ ಮಾತ್ರ ಸಂಸ್ಕೃತಿ ಮತ್ತು ದೇಶವನ್ನು ರಕ್ಷಿಸಬಹುದು. ಯೋಗವು ಪ್ರದರ್ಶನವಲ್ಲ. ಸ್ಪರ್ಧೆಗಳಿಂದ ನಾವು ಎಲ್ಲಿದ್ದೇವೆ ಮತ್ತು ಎಲ್ಲಿಗೆ ತಲುಪಬೇಕು ಎಂಬುದು ತಿಳಿಯುತ್ತದೆ’ ಎಂದರು.  ಶಾಸಕ ಟಿ.ಎಸ್.ಶ್ರೀವತ್ಸ ಫೆಡರೇಷನ್ ಆಫ್ ಇಂಡಿಯಾದ ಮುಖ್ಯಸ್ಥ ಅಶೋಕ್ ಕುಮಾರ್ ಅಗರವಾಲ್ ಸಿಇಒ ಇಂದು ಅಗರ್‌ವಾಲ್‌ ಅಧ್ಯಕ್ಷ ಅನಿರುದ್ಧ್ ಗುಪ್ತಾ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಧರ್ಮೇಂದ್ರ ವಿವಿಧ ಯೋಗ ಸಂಸ್ಥೆಗಳ ಪದಾಧಿಕಾರಿಗಳಾದ ಶ್ರೀಹರಿ ಗುರುರಾಜ್ ಕೆ.ಪ್ರಭು ಪ್ರೊ.ಎಂ.ಜಿ.ಅಮರನಾಥ್ ಪಿ.ಎನ್.ಗಣೇಶ್ ಕುಮಾರ್ ಎ.ನಟರಾಜು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.