ADVERTISEMENT

ಚಿರತೆ ಕುರಿತು ವದಂತಿ; ಭೀತಿಗೊಳ್ಳದಿರಲು ಮನವಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 4:37 IST
Last Updated 5 ಜುಲೈ 2021, 4:37 IST

ಮೈಸೂರು: ನಗರದಲ್ಲಿ ಚಿರತೆಗಳು ಅಲೆಯುತ್ತಿವೆ ಎಂಬ ವದಂತಿಯನ್ನು ನಂಬಬಾರದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

‘ಜೆ.ಪಿ.ನಗರದ ಸಮೀಪ ಸೇತುವೆಯೊಂದರ ಮೇಲೆ ಚಿರತೆಯೊಂದು ನಡೆದಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ಇದು ಮೈಸೂರಿನ ವಿಡಿಯೊ ಅಲ್ಲ’ ಎಂದು ಡಿಸಿಎಫ್ ಪ್ರಶಾಂತ್‌ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

‘ಇಲ್ಲಿನ ಬೆಮಲ್‌ ಆವರಣದಲ್ಲಿ ಇರಿಸಿದ್ದ ಬೋನಿಗೆ ಒಂದೂವರೆ ವರ್ಷದ ಹೆಣ್ಣು ಚಿರತೆಯು ಶುಕ್ರವಾರ ಬಿದ್ದಿದೆ. ಇದನ್ನು ಬಿಟ್ಟರೆ ಜೆ.ಪಿ.ನಗರದಲ್ಲಿ ಚಿರತೆ ಕಾಣಿಸಿರುವ ಮಾಹಿತಿ ಲಭಿಸಿಲ್ಲ’ ಎಂದು ವಲಯ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.