ADVERTISEMENT

ನೋ ಪಾರ್ಕಿಂಗ್‌; ದಂಡದ ಮೊತ್ತದಲ್ಲಿ ಭಾರಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2018, 15:12 IST
Last Updated 21 ಆಗಸ್ಟ್ 2018, 15:12 IST
   

ಮೈಸೂರು: ವಾಹನ ನಿಲುಗಡೆ ನಿಷೇಧ (ನೋ ಪಾರ್ಕಿಂಗ್)ಕ್ಕೆ ಒಳಗಾದ ಪ್ರದೇಶಗಳಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

ವಾಹನ ನಿಲುಗಡೆ ಇಲ್ಲದ ಪ್ರದೇಶಗಳಲ್ಲಿ ನಿಲ್ಲಿಸಿದ ವಾಹನಗಳನ್ನು ಟೋಯಿಂಗ್ ವಾಹನಗಳಿಂದ ತೆಗೆದುಕೊಂಡು ಠಾಣೆಗೆ ಸಾಗಿಸಲಾಗುತ್ತಿತ್ತು. ಇಂತಹ ವಾಹನಗಳ ಮೇಲೆ ವಿಧಿಸಲಾಗುತ್ತಿದ್ದ ದಂಡದ ಮೊತ್ತ ಸರಿಸುಮಾರು ಶೇ 200ಕ್ಕಿಂತಲೂ ಹೆಚ್ಚಾಗಿದೆ. ಈ ಕುರಿತು ರಾಜ್ಯ ಸರ್ಕಾರ ಮಾರ್ಚ್ 3ರಂದು ಪರಿಷ್ಕೃತ ಆದೇಶ ಹೊರಡಿಸಿತ್ತು. ಮಂಗಳವಾರದಿಂದಲೇ ಈ ಆದೇಶವನ್ನು ಜಾರಿಗೆ ತರಲಾಗುವುದು ಎಂದು ನಗರ ಪೊಲೀಸ್ ಕಮೀಷನರ್ ಡಾ.ಎ.ಎಸ್.ಸುಬ್ರಹ್ಮಣ್ಯೇಶ್ವರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಷ್ಕೃತ ದರ

ADVERTISEMENT
ವಾಹನಗಳ ವಿಧಗಳು ಹಿಂದಿನ ದಂಡದ ಮೊತ್ತ ಪರಿಷ್ಕೃತ ದಂಡದ ಮೊತ್ತ
ಭಾರಿ ಸಾಗಣೆ ವಾಹನಗಳು ₹ 600 ₹ 1,600
ಮಧ್ಯಮ ಸಾಗಣೆ ವಾಹನಗಳು ₹ 500 ₹ 1,350
ಕಾರು, ತ್ರಿಚಕ್ರ, ಟೆಂಪೊ, ಆಟೊ ₹ 400 ₹ 1,100
ದ್ವಿ ಚಕ್ರ ವಾಹನಗಳು ₹ 300 ₹ 750

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.